ಭೂಮಿ ಯಾವಾಗ ಕಂಪಿಸುತ್ತೆ ಎಂದು ಹೇಳಲಾಗದು. ಭೂಮಿ ಕಂಪಿಸಿದರೆ ಅದೆಷ್ಟೋ ಸಾವು ನೋವುಗಳು ಸಂಭವಿಸುತ್ತವೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಟರ್ಕಿ, ಸಿರಿಯಾ, ಮೊರಾಕ್ಕೊ. ಸುಮಾರು 35 ಸಾವಿರದಷ್ಟು ಜನರು ಟರ್ಕಿಯಲ್ಲಾದ ಭೂಕಂಪನಕ್ಕೆ ಅಸುನೀಗಿರುವುದು ಗೊತ್ತೇ ಇದೆ. ಆದರೀಗ ಇಂತಹ ಭೂಕಂಪನದ ಬಗ್ಗೆ ಎಚ್ಚರದ ಮಾಹಿತಿ ರವಾನಿಸಲು ಗೂಗಲ್ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗಾಗಿ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಅದೇನು ಗೊತ್ತಾ?
ಟೆಕ್ನಾಲಜಿ ದೈತ್ಯ ಗೂಗಲ್ ಬುಧವಾರದಂದು ಭೂಕಂಪನ ಅಲರ್ಟ್ ಸಿಸ್ಟಂ ಅನ್ನು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಪರಿಚಯಿಸಿದೆ. ಇದು ಭೂಮಿ ಕಂಪಿಸುವ ಮೊದಲೇ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಕೆ ಮಾಹಿತಿ ರವಾನಿಸುತ್ತದೆ.

ಅಂದಹಾಗೆಯೇ ಭೂಕಂಪನ ಪ್ರಪಂಚದ ಅತ್ಯಂತ ಸಾಮಾನ್ಯವಾದ ನೈಸರ್ಗಿಕ ವಿಕೋಪಗಳಲ್ಲಿ ಒಂದು. ಭಾರತೀಯರು ವಿವಿಧ ದೇಶಗಳಿಗೆ ಹೋಲಿಸಿದರೆ ಇಂತಹ ಪ್ರಕೃತಿ ವಿಕೋಪಗಳಿಗೆ ಒಳಗಾಗದೆ ಇರೋದು ತೀರಾ ವಿರಳ. ಸದ್ಯ ಗೂಗಲ್ ಪರಿಚಯಿಸಿರುವ ನೂತನ ಫೀಚರ್ಸ್ ಭಾರತೀಯರಿಗೆ ಉಪಯೋಗಕ್ಕೆ ಬರಲಿದೆ.
ಭಾರತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ಭೂಕಂಪಶಾಸ್ತ್ರದೊಂದಿಗೆ ಸಮಾಲೋಚಿಸಿ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ನೂತನ ಫೀಚರ್ ಬಿಡುಗಡೆ ಮಾಡಿದೆ. ಅಂದಹಾಗೆಯೇ ಪ್ರತಿ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಸಣ್ಣ ಅಕ್ಸೆಲೆರೋಮೀಟರ್ ಹೊಂದಿದ್ದು, ಮಿನಿ ಸಿಸ್ಮೋಮೀಟರ್ಗಲಾಗಿ ಕೆಲಸ ಮಾಡುತ್ತದೆ.


























