ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಸ್ಥಾಪಕಾಧ್ಯಕ್ಷರು ಮತ್ತು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲ್ಪಡುವ ‘ಪಿಲಿಗೊಬ್ಬು’ ಇದರ ಗೌರವಾಧ್ಯಕ್ಷರಾಗಿರುವ ಸಹಜ್ ರೈ ಬಳಜ್ಜ ರವರ ನೇತೃತ್ವದಲ್ಲಿ ಅ.22 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದ.ಕ ಜಿಲ್ಲೆಯ ಆಹ್ವಾನಿತ ಹತ್ತು ತಂಡಗಳ ‘ಪಿಲಿಗೊಬ್ಬು’ ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ನಡೆಯಲಿದ್ದು, ಈ ಹಿನ್ನೆಲೆ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಚಪ್ಪರ ಮುಹೂರ್ತ ನೆರವೇರಿತು.

ಉದಯ ಕೃಷ್ಣ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ಈ ವೇಳೆ ಸಹಜ್ ರೈ ಬಳಜ್ಜ, ನಾಗರಾಜ್ ನಡುವಡ್ಕ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್ ಈಶಾನ್ಯ, ರಾಜೇಶ್ ಗೌಡ, ಅಶೋಕ್ ಅಡೂರು, ಪ್ರೀತಮ್ ರೈ ಪೆರ್ನೆ, ಮಧು ಕುಮಾರ್, ರಾಜೇಶ್ ಬನ್ನೂರು, ರಾಧಾಕೃಷ್ಣ ಬೋರ್ಕರ್, ಅಜಿತ್ ರೈ ಹೊಸಮನೆ ಸಹಿತ ಹಲವರು ಉಪಸ್ಥಿತರಿದ್ದರು.



























