ಪುತ್ತೂರು : ಪುರುಷರಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದಯಭಾಗ್ಯ ಹೋಟೆಲ್ ನ ಮಾಲಕ ಸುರೇಶ್ ಪ್ರಭು (72) ರವರು ಹೃದಯಾಘಾತದಿಂದಾಗಿ ಅ.1 ರಂದು ನಿಧನರಾದರು.
ಸುರೇಶ್ ಪ್ರಭು ರವರು ಪುರುಷರಕಟ್ಟೆಯಲ್ಲಿ ಜಂಕ್ಷನ್ ಸಮೀಪ ಹಲವು ವರುಷಗಳಿಂದ ಉದಯಭಾಗ್ಯ ಹೋಟೆಲ್ ಅನ್ನು ಮುನ್ನಡೆಸುತ್ತಿದ್ದರು.
ಸುರೇಶ್ ಪ್ರಭು ರವರು ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸುರೇಶ್ ಪ್ರಭು ನಿಧನ ಹಿನ್ನೆಲೆ ಪುರುಷಕಟ್ಟೆಯ ಉದಯಭಾಗ್ಯ ಬಿಲ್ಡಿಂಗ್ ನ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಅಂಗಡಿ ಮಾಲಕರು ಸಂತಾಪ ಸೂಚಿಸಿದರು.