ಚಿಕ್ಕಮಗಳೂರು : ಕಾವೇರಿ ನೀರಿಗಾಗಿ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಈ ಹೋರಾಟಕ್ಕೆ ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬುದನ್ನು ಹೇಳಿದ್ದಾರೆ.
ಪ್ರೇಮ್ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಕಾವೇರಿ ನಮ್ಮದು ಎಂದು ಹೇಳಿದ್ದಾರೆ. ಕಾವೇರಿ ವಿಚಾರವಾಗಿ ರಾಜ್ಯಕ್ಕೆ ನ್ಯಾಯ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಪ್ರವಾಸದಲ್ಲಿರುವ ಚಿತ್ರ ನಟ ಪ್ರೇಮ್ ಕಾವೇರಿ ಹೋರಾಟಕ್ಕೆ ಈಗಾಗಲೇ ಸಾಕಷ್ಟು ನಟ ನಟಿಯರು ಸಾಥ್ ನೀಡಿದ್ರು. ಇದೀಗ ನಟ ನೆನಪಿರಲಿ ಪ್ರೇಮ್ ಕೂಡ ಬೆಂಬಲ ನೀಡಿದ್ದಾರೆ. ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಕಾವೇರಿ ನಮ್ಮದು, ದಯವಿಟ್ಟು ಕಾವೇರಿ ವಿಚಾರದಲ್ಲಿ ನ್ಯಾಯ ಕೊಡಿಸಿ ಎಂದು ಪತ್ರದಲ್ಲಿ ಬರೆದು ತಮ್ಮ ಕೈಯ ಅಚ್ಚನ್ನ ಪೇಪರ್ನಲ್ಲಿ ಮುದ್ರಿಸಿ ಪತ್ರ ಬರೆದು ಮನವಿ ಮಾಡಿದ್ದಾರೆ.