ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದ ಮಹೇಶ್ ಮೋಟಾರ್ಸ್ ಮಾಲಕ ಪ್ರಕಾಶ್ ಶೇಖ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ಅಂತಿಮ ಸಂಸ್ಕಾರ ನಡೆಯಿತು.
ಮೃತರ ತಂದೆ ಜಯರಾಮ ಶೇಖ ಹಾಗೂ ಕುಟುಂಬ ವರ್ಗವನ್ನು ಮಂಗಳೂರಿನ ಕುಲಶೇಖರದ ಅವರ ಮನೆಯಲ್ಲಿ ಭೇಟಿಯಾಗಿ ಅರುಣ್ ಕುಮಾರ್ ಪುತ್ತಿಲ ಸಾಂತ್ವನ ತಿಳಿಸಿದರು.

ಧರ್ಮಸ್ಥಳದ ಮೇಳದ ಬಸ್ ಖರೀದಿಸಿ ಜ್ಯೋತಿ ಬಸ್ ಎಂಬ ಸಂಸ್ಥೆ ಕಟ್ಟಿ ನಂತರ ಮಹೇಶ್ ಮೋಟಾರ್ಸ್ ಕಟ್ಟಿದ ಜಯರಾಮ ಶೇಖ ಅವರ ಶ್ರಮವನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡರು.
ಉದ್ಯಮ ಕಟ್ಟಿ ಬೆಳೆಸಲು ತಂದೆ ಜಯರಾಮ ಶೇಖ ರವರು ತಮ್ಮ ಪುತ್ರ ಪ್ರಕಾಶ್ ಶೇಖ ರವರಿಗೆ ಹಸ್ತಾಂತರಿಸಿದ ನಂತರ ಅವರು ತಿರುಗಿ ನೋಡಿದ್ದಿಲ್ಲ. ಪ್ರಕಾಶ್ ಶೇಖ ರವರು ಯುವ ಉದ್ಯಮಿಗಳಿಗೆ ಪ್ರೇರಣೆಯಾಗುವ ರೀತಿ ನೂರಾರು ಬಸ್ ಗಳು ಸಹಿತ ಹಲವು ಉದ್ಯಮಗಳನ್ನು ಬೆಳೆಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದರು.
ಕೊಡುಗೈದಾನಿಯಾಗಿದ್ದ ಪ್ರಕಾಶ್ ಶೇಖ ರವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.