ಪುತ್ತೂರು : ಪಡೀಲ್ ನಿವಾಸಿ, ರೀಮಾ ಪುಟ್ ವೇರ್ ಮಾಲಕ ಖಾಸೀಂ ಅವರು ಹೃದಯಾಘಾತದಿಂದ ನಿಧನರಾದರು.

ಅ.6 ನಾಳೆ ಖಾಸೀಂ ಅವರ ಮನೆಯಲ್ಲಿ ಮೌಲೀದ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಆಮಂತ್ರಿಸಲು ನೆರೆಹೊರೆ, ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ವೈದ್ಯರ ಸಲಹೆಯಂತೆ ಮಂಗಳೂರಿಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು
ವರದಿಯಾಗಿದೆ.
ಖಾಸೀಂ ಅವರು ಹಲವಾರು ವರ್ಷಗಳ ಹಿಂದೆ ಪುತ್ತೂರಿನಲ್ಲಿ
ಕಟ್ಲೇರಿ ಅಂಗಡಿ ವ್ಯಾಪಾರಸ್ಥರಾಗಿದ್ದ ಮರ್ಹೂಮ್ ಇಸ್ಮಾಯಿಲ್ ಅವರ ಮಗ.
ಖಾಸೀಂ ಅವರು ಪುತ್ತೂರಿನ ಶ್ರೀಧರ ಭಟ್ ಬ್ರದರ್ಸ್ ಮೆಡಿಕಲ್ ಶಾಪ್ ನ ಮುಂಭಾಗ ರೀಮಾ ಪುಟ್ ವೇರ್ ಮಳಿಗೆ ನಡೆಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

























