ಹೊಸ ಕಾರು ಖರೀದಿಸಿ ಅದನ್ನು ಓಡಿಸಲು ಬರದೆ ಶೋರೂಮ್ನ ಗ್ಲಾಸ್ ಅನ್ನೇ ಒಡೆದು ಹಾಕಿದ ಘಟನೆ ಬೆಂಗಳೂರಿನ ಮಹೀಂದ್ರಾ ಶೋರೂಮ್ನಲ್ಲಿ ನಡೆದಿದೆ.
ಹೊಸ ಕಾರನ್ನು ಖರೀದಿಸಿದ ವ್ಯಕ್ತಿ ಮಹೀಂದ್ರಾ ಶೋ ರೂಮ್ನಿಂದ ತೆಗೆದುಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ ಶೋರೂಮ್ನ ಗ್ಲಾಸ್ ಬಾಗಿಲುಗಳಿಗೆ ಗುದ್ದಿ ಸೀದಾ ರಸ್ತೆಯ ಬಳಿ ಹೋದ ಘಟನೆ ನಡೆದಿದೆ.
ವರದಿಯ ಪ್ರಕಾರ ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದರ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವರದಿಯ ಪ್ರಕಾರ ಈ ಅಪಘಾತ ಹೇಗೆ ಸಂಭವಿಸಿದೆ ಎನ್ನುವುದು ತಿಳಿದಿಲ್ಲ. ಅಪಘಾತದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಕಾರಿನಲ್ಲಿ ಕುಳಿತ ಡ್ರೈವರ್ ಕಾರನ್ನು ಕಟ್ಟಡದ ಅಂಚಿಗೆ ತಂದು ನಿಲ್ಲಿಸಿದ್ದು, ಕಾರು ಪೂರ್ತಿಯಾಗಿ ಜಖಂಗೊಂಡಿದೆ. ಅಲ್ಲಿ ನರೆದಿದ್ದ ಶೋರೂಮ್ ಸಿಬ್ಬಂದಿ ಕಾರನ್ನು ಹಿಂದಕ್ಕೆಳೆಯಲು ಪ್ರಯತ್ನಿಸುವುದನ್ನು ಕಾಣಬಹುದು.
ಈ ರೀತಿ ಕಾರಿನ ಶೋರೂಮ್ನಲ್ಲಿ ಅಪಘಾತ ಸಂಭವಿಸುರುವುದು ಇದೇ ಮೊದಲಲ್ಲ. ಈ ಹಿಂದೆ ಹೈದ್ರಾಬಾದ್ನಲ್ಲಿ ಕಾರನ್ನು ಸರಿಯಾಗಿ ಓಡಿಸಲು ಬರದ ವ್ಯಕ್ತಿಯೊಬ್ಬ ಕಾರನ್ನು ಶೋ ರೂಮ್ನಿಂದ ತೆಗೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ, ಅದೃಷ್ಟವಶಾತ್ ಚಾಲಕ ಬದುಕಳಿದ ಘಟನೆ ನಡೆದಿತ್ತು. ಇದರ ವಿಡಿಯೋ ಕೂಡ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಬೆಂಗಳೂರಿನ ಘಟನೆಯೂ ವೈರಲ್ ಆಗುತ್ತಿದೆ..
ವೈರಲ್ ಆಗುತ್ತಿರುವ ವೀಡಿಯೋ


























