ಪುತ್ತೂರು : ಝೀ ಕನ್ನಡ ವಾಹಿನಿ ನಡೆಸುತ್ತಿರುವ ‘ಸರಿಗಮಪ ಸೀಸನ್ – 20’ ಸಂಗೀತ ಸ್ಪರ್ಧೆಯ ಮೆಗಾ ಅಡಿಷನ್ ನಲ್ಲಿ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆಯಾಗಿದ್ದಾರೆ.

ಅಡಿಷನ್ ನಲ್ಲಿ ದೇಶವಿದೇಶಗಳ ಸುಮಾರು ಲಕ್ಷಕ್ಕೂ ಮಿಕ್ಕಿ ಸ್ಪರ್ಧಿಗಳ ಪೈಕಿ ಮೆಗಾ ಅಡಿಷನ್ ಗೆ 40 ಮಂದಿ ಆಯ್ಕೆಯಾಗಿದ್ದರು. ಅದರಲ್ಲಿ ಅಂತಿಮ ಸ್ಪರ್ಧೆಗೆ 20 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಸಮನ್ವಿ ರೈ ಓರ್ವರು.
ಮೆಗಾ ಅಡಿಷನ್ ನ ಎಪಿಸೋಡ್ ಅ.7 ರಂದು ಆರಂಭವಾಗಲಿದ್ದು, ರಾತ್ರಿ 7.30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
ಸಮನ್ದಿ ರೈಯವರು ವಿದ್ವಾನ್ ದಿ. ಕಾಂಚನ ನಾರಾಯಣ ಭಟ್ ಮತ್ತು ವಿದುಷಿ ವೀಣಾ ರಾಘವೇಂದ್ರ ರವರಿಂದ ತರಬೇತಿ ಪಡೆದಿರುತ್ತಾರೆ.
ಖ್ಯಾತ ಸಂಗೀತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ ರವರ ಸಂಗೀತ ತಂಡದ ಕಲಾವಿದೆಯಾಗಿರುವ ಈಕೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ ಮತ್ತು ಸವಿತಾ ಎ. ರೈ ದಂಪತಿಯ ಪುತ್ರಿ.


























