ಸುಳ್ಯ : ಕುರುಂಜಿಭಾಗ್ ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿದ ತಂಡವೊಂದು ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿದ್ದಾರೆಂದು ಡಾ.ಜ್ಯೋತಿ ರೇಣುಕಾಪ್ರಸಾದ್ ರವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ. ಜ್ಯೋತಿ ಆರ್. ಪ್ರಸಾದ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಡಾ. ಜ್ಯೋತಿ ಆರ್. ಪ್ರಸಾದ್ ಎಂಬವರು ಅವರ ಬಾವ ಡಾ. ಚಿದಾನಂದ, ಅವರ ಹೆಂಡತಿ ಶೋಭಾ ಚಿದಾನಂದ, ಮಗ ಅಕ್ಷಯ್ ಕೆ ಸಿ, ಮಗಳು ಡಾ. ಐಶ್ವರ್ಯ, ಸಂಬಂಧಿ ಹೇಮನಾಥ ಕೆ ವಿ, ಜಗದೀಶ್ ಅಡ್ತಲೆ ಮತ್ತು ಇತರ ಕೆಲವರು ಅಕ್ರಮ ಪ್ರವೇಶ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಸೆ.6 ರಂದು ಡಾ. ಜ್ಯೋತಿ ಆರ್. ಪ್ರಸಾದ್ ಅವರು ಮಂಗಳೂರಿಗೆ ಹೋಗಿದ್ದು, ಈ ವೇಳೆ ಆರೋಪಿತರು ಕುರುಂಜಿಭಾಗ್‌ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿರುವುದಾಗಿಯೂ ಅಲ್ಲಿದ್ದ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರ ಮೊಬೈಲ್‌ಗಳನ್ನು ಕೇಳಿ ಪಡೆದು, ಸಿ ಸಿ ಕ್ಯಾಮಾರಗಳ ಮತ್ತು ಇತರ ಮಾಹಿತಿ ಪಡೆದು, ಮೊಬೈಲ್‌ಗಳನ್ನು ಹಿಂತಿರುಗಿಸಿ, ಬೆದರಿಸಿ ಹೋಗಿರುವುದಾಗಿ ಡಾ. ಜ್ಯೋತಿಯವರು ದೂರಿನಲ್ಲಿ ಆರೋಪಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಗಾಬರಿಯಾಗಿ ಮಂಗಳೂರಿನಿಂದ ಸುಳ್ಯದ ಸಂಸ್ಥೆಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 115/2023 ಕಲಂ : 448, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























