ಮಜಾ ಮಾಡೋಣ ಅಂತ ಆಸೆಯಲ್ಲಿ ಹೋದ್ರೆ ಅಲ್ಲಿ ಗ್ರಹಚಾರ ವಕ್ಕರಿಸಿ ಬಿಡುತ್ತೆ.. ಹೀಗೆ ರಷ್ಯಾ ಬೆಡಗಿಯರ ಡ್ಯಾನ್ಸ್ನ ಕಣ್ತುಂಬಿ ಕೊಳ್ಳೋಣ ಅಂತ ಹೋದ ಜನರಿಗೆ ಬಡಿಗೆ ಮೇಲೆ ಬಡಿಗೆ ಬಿದ್ದಿತ್ತು. ಡ್ಯಾನ್ಸ್ ನೋಡೋಣ ಅಂತ ಹೋದವರು ಶರ್ಟ್ ಚಪ್ಪಲಿ ಹರ್ಕೊಂಡ್ ಮನೆ ಸೇರಿದ ಪ್ರಸಂಗ ನಿನ್ನೆ ನಡೆದಿದೆ.
ಉತ್ತರಪ್ರದೇಶದ ಜಾನ್ಸಿಯಲ್ಲಿ ನಡೆದ ‘ಜಲ್ ವಿಹಾರ್ ಮಹೋತ್ಸವ’ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ರಷ್ಯಾದ ಡ್ಯಾನ್ಸರ್ಗಳು ವೇದಿಕೆ ಮೇಲೆ ಹೆಜ್ಜೆಹಾಕುತ್ತಿದ್ದ ವೇಳೆ ಜನರು ಡ್ಯಾನ್ಸ್ ನೋಡಲು ನೂಕಾಟ-ತಳ್ಳಾಟ ನಡೆಸಿದ್ರು. ಈ ವೇಳೆ ಕಾಲ್ತುಳಿತ ಸಂಭವಿಸೋ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನ ಚದುರಿಸಿದ್ರು. ಪೊಲೀಸರ ಲಾಠಿ ಚಾರ್ಜ್ನಿಂದ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
और देखो रशियन डांस
— Satyam Mishra/सत्यम् मिश्र (@satyammlive) October 6, 2023
झांसी में रशियन डांसर देखकर भीड हुई बेकाबू, पुलिस ने चलाई लाठी।#Jhansi pic.twitter.com/IVazXl2xKC


























