ಹಾವೇರಿ : ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಯುವಕರು ರಕ್ತದಾನ ಹಾಗೂ 22 ಕೆ.ಜಿಯ ಕೇಕ್ ಮಾಡುವ ಮೂಲಕ ನೆಚ್ಚಿನ ಹೋರಿಯ ಬರ್ತ್ಡೇ ಸೆಲೆಬ್ರೇಶನ್ ಮಾಡಲಾಗಿದೆ.
ಗ್ರಾಮದ ಸಿದ್ಧಲಿಂಗೇಶ ಎಂಬುವವರ ‘ರಾಕ್ಷಸ 220’ ಎಂಬ ಹೆಸರಿನ ಹೋರಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ನೆರವೇರಿಸಲಾಯಿತು.

ಈ ಹಿನ್ನೆಲೆಯಲ್ಲಿ ಹೋರಿಗೆ ಬಟ್ಟೆ ಹಾಗೂ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಬೇರೆ ಊರಿಂದ ಸಾಕಷ್ಟು ಯುವಕರು ಕೂಡ ಆಗಮಿಸಿದ್ದರು. ಬಳಿಕ ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ 22 ಕೆಜಿಯ ಕೇಕ್ ಕಟ್ ಮಾಡಿ ಹೋರಿಗೆ ತಿನ್ನಿಸಲಾಯಿತು.
ಇದೇ ವೇಳೆ ಹೋರಿ ಹುಟ್ಟಿದ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಯುವಕರು ರಕ್ತದಾನ ಮಾಡಿ ನೆಚ್ಚಿನ ಹೋರಿಗೆ ಶುಭಾಶಯ ಕೋರಿದರು. ಸುಮಾರು 50ಕ್ಕೂ ಹೆಚ್ಚು ಯುವಕರು ಈ ವೇಳೆ ರಕ್ತದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದರು. ರಾಕ್ಷಸ 220 ಜೊತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ವ್ಯಕ್ತಪಡಿಸಿದರು.


























