ಪುತ್ತೂರು : ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಟ್ಟೆ ಶಾಲೆಯ ಬಳಿಯ ದಿನಸಿ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ನಡೆದಿದೆ.

ಶೇಖರ್ ನಾಯಕ್ ಎಂಬರಿಗೆ ಸೇರಿದ ಅಂಗಡಿಯ ಬೀಗ ಮುರಿದ ಕಳ್ಳರು ಒಳಗೆ ನುಗ್ಗಿ ಜಾಲಾಡಿದ್ದಾರೆ.
ಅ.8 ರಂದು ಬೆಳಿಗ್ಗೆ ಶೇಖರ್ ನಾಯಕ್ ಅಂಗಡಿಗೆ ಬಂದಾಗ ಕಳ್ಳತನ ನಡೆದ ಬಗ್ಗೆ ಬೆಳಕಿಗೆ ಬಂದಿದೆ.
ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಹೊಯ್ಸಳ ಪೊಲೀಸರು ಹಾಗೂ ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























