ವಿಘ್ನ ನಿವಾರಕನ ಮೆರವಣಿಗೆ ವೇಳೆ ಎದುರಾದ ವಿಘ್ನವೊಂದು ಓರ್ವನ ಸಾವಿಗೆ ಕಾರಣವಾಗಿದೆ.
ಅಡುಗೋಡಿಯಲ್ಲಿ ಕತ್ತಲ ಹೊತ್ತಲ್ಲಿ ಪುಡಿರೌಡಿಗಳ ಅಟ್ಟಹಾಸ ಇಡೀ ಏರಿಯಾವನ್ನೇ ಬೆಚ್ಚಿ ಬೀಳಿಸಿದೆ. ಗಲಾಟೆಯ ಜಾಡು ಹಿಡಿದು ಹೊರಟಿರೋ ಪೊಲೀಸರು ಕಿರಾತಕರನ್ನ ಹಡೆಮುರಿಕಟ್ಟಲು ಸಜ್ಜಾಗಿದ್ದಾರೆ.
21 ದಿನಗಳಿಂದ ಬೆಂಗಳೂರಿನ ಅಡುಗೋಡಿಯಲ್ಲಿ ಕಳೆಗಟ್ಟಿದ್ದ ಸಂಭ್ರಮದ ಗಣೇಶೋತ್ಸವ ನಿನ್ನೆ ಸೂತಕವನ್ನ ಸೃಷ್ಟಿಸಿದೆ.
21 ದಿನ ಗಣೇಶನ್ನ ಆರಾಧಿಸಿ ಎಂಜಾಯ್ ಮಾಡಿದ್ದ ಏರಿಯಾ ಹುಡುಗ್ರು ನಿನ್ನೆ ವಿಸರ್ಜನೆ ವೇಳೆ ಎಡವಿ ಬಿಟ್ಟಿದ್ದಾರೆ.
ಗಣಪತಿ ವಿಸರ್ಜನೆ ವೇಳೆ 2 ಗುಂಪುಗಳ ಕಾದಾಟ
ಅಡುಗೋಡಿಯಲ್ಲಿ ಮೆರವಣಿಗೆ ಮೂಲಕ ಶುರುವಾದ ಗಣೇಶ ವಿಸರ್ಜನೆ ಕಾರ್ಯ ಕೊಲೆಯಲ್ಲಿ ಅಂತ್ಯವಾಗಿ ಹೋಗಿದೆ. ಮೆರವಣಿಗೆ ವೇಳೆ ಕಾಲ್ಕೆರೆದ 2 ಗುಂಪುಗಳು ಏರಿಯಾವನ್ನ ಸ್ಮಶಾನ ಮೌನಕ್ಕೆ ತಳ್ಳಿವೆ. ಲಾಂಗು, ಮಚ್ಚುಗಳ ಅಟ್ಟಹಾಸ ಅಡುಗೋಡಿ ರಸ್ತೆಯನ್ನ ಕೆಂಪೇರುವಂತೆ ಮಾಡಿದೆ. ಗಣಪತಿ ಬಿಡುವಾಗ ಯಾಕ್ರೋ ಇಲ್ಲಿ ಡ್ಯಾನ್ಸ್ ಮಾಡ್ತೀರಾ ಅಂದಿದ್ದಕ್ಕೆ ಶುರುವಾದ ಗಲಾಟೆ ಶ್ರೀನಿವಾಸ್ ಎಂಬಾತನ ಸಾವಿಗೆ ಕಾರಣವಾಗಿದೆ.
ಘಟನೆಯಲ್ಲಿ ಓರ್ವ ಗಂಭೀರ.. ಶ್ರೀನಿವಾಸ್ ತಾಯಿಗೂ ಇರಿತ
ಗಣೇಶ ವಿಸರ್ಜನೆ ಶುರುವಾದ ಗಲಾಟೆ ವೇಳೆ ಶ್ರೀನಿವಾಸ್ ಎಂಬಾತನ ಮೇಲೆ ಹಲ್ಲೆ ನಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಗಲಾಟೆಯಲ್ಲಿ ರಂಜಿತ್ ಎನ್ನುವವನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನೂ ಗಲಾಟೆ ಬಿಡಿಸಲು ಹೋದ ಶ್ರೀನಿವಾಸ್ ತಾಯಿಗೂ ಚಾಕು ಇರಿಯಲಾಗಿದ್ದು, ಆಕೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿ, ಕಣ್ಣೀರ ಕೋಡಿ ಹರಿದಿದೆ.
ಗಲಾಟೆಗೆ ಕಾರಣವಾಯ್ತಾ ಹಳೇ ದ್ವೇಷ..!!
ಅಡುಗೋಡಿಯಲ್ಲಿ ನಡೆದ ಗಲಾಟೆ ಹಿಂದೆ ಹಳೇ ದ್ವೇಷ ಅಡಗಿತ್ತು ಅನ್ನೋ ಆರೋಪ ಕೇಳಿ ಬಂದಿದೆ.
ಗಲಾಟೆಯಲ್ಲಿ ಲಾಂಗು-ಮಚ್ಚು ಹಿಡಿದು ಹೊಡೆದಾಡಿಕೊಂಡಿರೋದು ಗಲಾಟೆ ಮಾಡಬೇಕು ಅಂತಾ ಮೊದಲೇ ಸ್ಕೆಚ್ ಹಾಕಲಾಗಿತ್ತಾ ಅನ್ನೋ ಅನುಮಾನಗಳನ್ನ ಮೂಡಿಸಿವೆ. ಗಲಾಟೆ ಸಂದರ್ಭ ಅದೇ ಸ್ಥಳದಲ್ಲಿ ಓರ್ವ ರೌಡಿಶೀಟರ್ ಇದ್ದ ಬಗೆಯು ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಇಬ್ಬರು ರೌಡಿ ಶೀಟರ್ಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಿಂದಿನ ತಿಂಗಳು ಡ್ಯಾನ್ಸ್ ವಿಚಾರದಲ್ಲಿ ಗಲಾಟೆ ಆಗಿರುತ್ತೆ. ಅದೇ ಅಪೋಸಿಟ್ ಗ್ಯಾಂಗ್ನವರು ಇಲ್ಲಿ ಬಂದು ಡ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಬೇಡ ಎಂದು ಹೇಳಿದ್ದಾರೆ. ಇದರಲ್ಲಿ ಶ್ರೀನಿವಾಸ್ ಕೂಡ ಗಲಾಟೆ ಮಾಡಿದ್ದಾನೆ. ಗಣಪತಿಯಲ್ಲಿ ಕುಣಿಯುತ್ತಿರುವವರು ಬಂದು ಚಾಕು ಇರಿದಿದ್ದಾರೆ. ಇದರಿಂದ ಸಾವನ್ನಪ್ಪಿದ್ದು, ಮೃತದೇಹ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿದೆ.
ಸಿಕೆ ಬಾಬಾ, ಅಗ್ನೇಯ ವಿಭಾಗ ಡಿಸಿಪಿ
ವಿಘ್ನ ನಿವಾರಕನ ಮೆರವಣಿಗೆ ವೇಳೆ ವಿಘ್ನ ಉಂಟಾಗಿ ಓರ್ವನ ಪ್ರಾಣ ಪಕ್ಷಿ ಹಾರಿಹೋಗಿದೆ. 2 ಗುಂಪುಗಳ ನಡುವಿನ ದ್ವೇಷ ಅಡುಗೋಡಿಯನ್ನ ಮೌನಕ್ಕೆ ತಳ್ಳಿದೆ. ಕಿರಾತಕರ ಜಾಡು ಹಿಡಿದು ಹೊರಟಿರೋ ಪೊಲೀಸರು ಗಲಾಟೆಯ ಕಿಂಗ್ಪಿನ್ಗಳ ಹೆಡೆಮುರಿಕಟ್ಟಲು ಬಲೆ ಬೀಸಿದ್ದಾರೆ.

























