ಪುತ್ತೂರು : ‘ಅನಿತಾ ಬೀಡಿ ವರ್ಕ್’ ಕಂಪೆನಿ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆ ಕಡಂಬು ಎಂಬಲ್ಲಿರುವ ಅನಿತಾ ಬೀಡಿ ವರ್ಕ್ಸ್ ಮಾಲಕ ಮಹಮ್ಮದ್ ಆಲಿ ಯಾನೆ ಮಮ್ಮು ಅವರ ಮನೆ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಸಮೀಪ ಇರುವ ಅವರ ಮನೆ ಬಳಿಯೇ ಅನಿತಾ ಬೀಡಿ ಕಂಪೆನಿ ಕಾರ್ಯ ನಿರ್ವಹಿಸುತ್ತಿದೆ. ಆದಾಯ ತೆರಿಗೆ ಇಲಾಖೆಯ ಹಲವು ಅಧಿಕಾರಿಗಳಿಂದ ಮನೆ ಮತ್ತು ವರ್ಕ್ ಶಾಪ್ ಗೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


























