ರಾಮನಗರ : 10 ರೂಪಾಯಿ ಚಿಲ್ಲರೆ ಆಸೆಗೆ ವ್ಯಕ್ತಿಯೋರ್ವ 1 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಚನ್ನಪಟ್ಟಣ ನಗರದಲ್ಲಿ ನಡೆದಿದೆ.
ಚನ್ನಪಟ್ಟಣದ ನಗರದ ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡ ವ್ಯಕ್ತಿ.
ಚಿಲ್ಲರೆ ಆಸೆ ತೋರಿಸಿ ಅಪರಿಚಿತ ಖದೀಮನೊರ್ವ ಒಂದು ಲಕ್ಷ ಹಣ ದೋಚಿದ್ದಾನೆ. ನಗರದ ಕೆನರಾ ಬ್ಯಾಂಕ್ ಬಳಿ ಈ ಘಟನೆ ನಡೆದಿದೆ. ರಾಘವೇಂದ್ರ ಬ್ಯಾಂಕ್ನ ಎಟಿಎಂಗೆ ಹೋಗಿ ಹಣ ಡ್ರಾ ಮಾಡಿಕೊಂಡು ಹೊರಬಂದು, ತನ್ನ ದ್ವಿಚಕ್ರ ವಾಹನದ ಬಳಿ ನಿಂತಿದ್ದಾನೆ.
ಈ ವೇಳೆ ಈತನ ಬಳಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಹತ್ತು ರೂಪಾಯಿ ನೋಟುಗಳನ್ನು ಆತನ ಹಿಂದೆ ಬೀಳಿಸಿ ಹಣ ಬಿದ್ದಿದೆ ನೋಡಿ ಹೇಳಿ ಮುಂದೆ ಹೋಗಿದ್ದಾನೆ. ಹತ್ತು ರೂಪಾಯಿ ಆಸೆಗಾಗಿ ರಾಘವೇಂದ್ರ ತನ್ನ ಕೈಯಲ್ಲಿದ್ದ ಒಂದು ಲಕ್ಷ ಹಣದ ಕವರನ್ನು ಬೈಕ್ ಬಳಿ ಇಟ್ಟು 10 ರೂಪಾಯಿ ನೋಟನ್ನು ಎತ್ತುಕೊಳ್ಳಲು ಮುಂದಾಗಿದ್ದಾನೆ.
ಈ ವೇಳೆ ಎಂಟ್ರಿಯಾದ ಮತ್ತೊಬ್ಬ ಖದೀಮ ಬೈಕ್ನಲ್ಲಿದ್ದ 1 ಲಕ್ಷ ಹಣ ದೋಚಿ ಎಸ್ಕೇಪ್ ಆಗಿದ್ದಾನೆ. ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.


























