ಕೇಪು : ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ ಅಡ್ಯನಡ್ಕ ಮತ್ತು ಕೇಪು ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಪಂಚಾಯತ್ ಅವರಣದಲ್ಲಿ ನಾಯಿಗೆ ಚುಚ್ಚು ಮದ್ದು ನೀಡುವ ಮೂಲಕ ಚಾಲನೆ ನೀಡಲಾಯಿತು.

ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 15 ಕಡೆ ಶಿಬಿರವನ್ನು ಏರ್ಪಡಿಸಲಾಗಿದ್ದು, ಒಟ್ಟು 250ಕ್ಕಿಂತ ಹೆಚ್ಚು ನಾಯಿಗಳಿಗೆ ಚುಚ್ಚು ಮದ್ದು ನೀಡಲಾಯಿತು.


ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪರಮೇಶ್ವರ ನಾಯ್ಕ, ಜಾನುವಾರು ಅಧಿಕಾರಿ ಕೆ ಈಶ್ವರ ಭಟ್, ಮಂದಾರ ಜೈನ್, ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ರಮೇಶ ರವರು ಚುಚ್ಚುಮದ್ದು ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ಮಣಿಯಾಣಿ, ಉಪಾಧ್ಯಕ್ಷರಾದ ಹೇಮಾವತಿ, ಸದಸ್ಯರುಗಳಾದ ಪುರುಷೋತ್ತಮ ಕೆ, ಜಗಜ್ಜೀವನ್ ರಾಮ್ ಶೆಟ್ಟಿ, ಮೋಹಿನಿ , ಜಯಶೀಲ ಹಾಜರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ ಭಕ್ತ, ರಾಮನಾಯ್ಕ ಕಾರ್ಯದರ್ಶಿ, ಸಿಬ್ಬಂದಿಗಳಾದ ಚಂದ್ರಶೇಖರ , ಸುಧಾಕರ ಡಿ , ರಮೇಶ, ಸುರೇಶ ಉಪಸ್ಥಿತರಿದ್ದರು.





























