ಸುಬ್ರಹ್ಮಣ್ಯ : ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದು ಚಿನ್ನ ಕಳವು ಮಾಡಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ಹೊನ್ನವಳ್ಳಿ ಮೂಲದ ಪ್ರಭಾಕರ್ (35) ಬಂಧಿತ ಆರೋಪಿ.
ಈತ ಸುಬ್ರಹ್ಮಣ್ಯ ಪಾರ್ಕಿಂಗ್ ಸ್ಥಳದಲ್ಲಿ ಕಾರಿನ ಗಾಜು ಒಡೆದು ಚಿನ್ನವನ್ನು ಕದ್ದಿದ್ದು, ಈತನನ್ನು ಸುಬ್ರಹ್ಮಣ್ಯ ರೈಲು ನಿಲ್ದಾಣ ಬಳಿ ಬಂಧಿಸಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ಖತರ್ನಾಕ್ ಖದೀಮನಾಗಿದ್ದು, 15 ದಿನದ ಹಿಂದೆ ಧರ್ಮಸ್ಥಳದಲ್ಲಿ 40 ಗ್ರಾಂ ಚಿನ್ನವನ್ನು ಇದೇ ಮಾದರಿಯಲ್ಲಿ ಕದ್ದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರ ಮುಂದೆ ಒಪ್ಪಿಕೊಂಡಿರುತ್ತಾನೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಕಾರ್ತಿಕ ಅವರ ನೇತೃತ್ವದಲ್ಲಿ ಮುರಳಿಧರ್ (ತನಿಖೆ ) ಹಾಗೂ ಎರಡು ತಂಡ ರಚಿಸಲಾಗಿತ್ತು. ಸಿಬ್ಬಂದಿಗಳಾದ ಕರುಣಾಕರ, ಮಹೇಶ್, ಕುಮಾರ್, ಆನಂದ್, ವಿಠ್ಠಲ್ ಬಸವರಾಜ್, ರೋಹಿತ್, ಕೃಷ್ಣ ಭಾಗಿಯಾಗಿದ್ದರು.

























