ಬಂಟ್ವಾಳ : ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡದವರು ಹಲ್ಲೆ, ನಿಂದನೆ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಪಾಣೆಮಂಗಳೂರು ಗ್ರಾಮದ ನಿವಾಸಿ ಸಿಲ್ವಯ ಫೆರ್ನಾಂಡಿಸ್ ಎಂಬವರು ನೀಡಿದ ದೂರಿನಂತೆ ಮನೋಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಲ್ವಿಯ ಫೆರ್ನಾಂಡಿಸ್ (40) ಎಂಬವರ ಪತಿ ವಿದೇಶದಲ್ಲಿದ್ದು, ತನ್ನ ಮಗಳೊಂದಿಗೆ ಮನೆಯಲ್ಲಿ ವಾಸ್ತವ್ಯವಿರುವುದಾಗಿದೆ. ಮನೋಜ್ ಎಂಬವರು ಅ.12 ರಂದು ಬೆಳಿಗ್ಗೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಮೀನನ್ನು ತನ್ನ ಹೆಸರಿಗೆ ದಾಖಲಿಸಿ ಕೊಡದಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 115/2023 ಕಲಂ: 447, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು. :
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪಾಣೆಮಂಗಳೂರು ಗ್ರಾಮದ ನಿವಾಸಿ ಮನೋಜ್ ಎಂಬವರು ಪ್ರತಿ ದೂರು ನೀಡಿದ್ದು, ನತಾಲಿಯ ಫೆರ್ನಾಂಡಿಸ್, ಜಾನ್ ಫೆರ್ನಾಂಡಿಸ್, ಸಿಲ್ವಿಯ ಫೆರ್ನಾಂಡಿಸ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೋಜ್ ರನ್ನು ಅ.12 ರಂದು ಬೆಳಿಗ್ಗೆ, ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ನತಾಲಿಯ ಫೆರ್ನಾಂಡಿಸ್, ಜಾನ್ ಫೆರ್ನಾಂಡಿಸ್, ಸಿಲ್ವಿಯ ಫೆರ್ನಾಂಡಿಸ್ ಎಂಬವರು ತಮ್ಮ ಮನೆ ಬಳಿ ಕರೆಸಿ, ಜಮೀನು ವಿಚಾರದಲ್ಲಿ ಮಾತನಾಡಿ, ಬಳಿಕ ಕೈಯಿಂದ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 116/2023 ಕಲಂ: 323, 355, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.