ವಿಟ್ಲ : ಜೀವನದಲ್ಲಿ ಯಾರು ಕೂಡ ಕಷ್ಟಪಡಲು ಮುಂದೆ ಬರವುದಿಲ್ಲ. ಇಂದು ಪ್ರತಿಯೊಬ್ಬರೂ ಸುಲಭವಾದ ಕೆಲಸಗಳನ್ನು ಆಯ್ಕೆಮಾಡುತ್ತಿದ್ದಾರೆ. ಆದ್ದರಿಂದ ಇಂದು ಹೆಚ್ಚಾಗಿ ನಾವು ನಮ್ಮ ಜೀವನದಲ್ಲಿ ಸೋಲುತ್ತಿದ್ದೇವೆ. ಯಾವಾಗ ಅವಕಾಶಗಳು ನಮಗೆ ಸಿಗುತ್ತದೋ ಅದನ್ನು ಬಳಸಿಕೊಂಡಾಗ ಮಾತ್ರ ಯಶಸ್ಸು ನಮಗೆ ಲಭಿಸುತ್ತದೆ. ಅವಕಾಶಗಳು ಸಿಗುವುದು ಜೀವನದಲ್ಲಿ ಒಂದು ಕ್ಷಣ ಮಾತ್ರವೇ. ಆ ಸಮಯವನ್ನು ಕಳೆದು ಕೊಂಡರೆ ಮತ್ತೆ ಸಿಗಲಾರದು ಎಂದು ಜೆಸಿಐ ಪ್ರೈಮ್ ಗ್ರಾಜುವೆಟ್ ಆಗಿರುವ ಜೆಸಿ ಸತೀಶ್ ಭಟ್ ಬಿಳಿನೆಲೆ ಹೇಳಿದರು.

ಅವರು ವಿಠಲ ಎಜುಕೇಶನ್ ಸೊಸೈಟಿ (ರಿ )ವಿಟ್ಲ ಮತ್ತು ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಆಶ್ರಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಣಾ ನಾಯಕತ್ವ ಎಂಬ ವಿಷಯದಲ್ಲಿ ತರಬೇತಿ ನೀಡುತ್ತಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಮಾತನಾಡಿ ವಿದ್ಯಾರ್ಥಿಗಳಿಗೆ ಇಂಥ ತರಬೇತಿ ಪ್ರೇರಣೆಯಾಗಲಿ ಎಂದರು.
ವೇದಿಕೆಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಚಂದ್ರಕಲಾ ಸಿ ಉಪಸ್ಥಿತರಿದ್ದರು.
ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಪ್ರಕಾಶ್ ನಾಯಕ್ ಪರಿಚಯಸಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಚೇತನಾ ವಂದಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ಮಾಧವ್ ವಿ. ಎಸ್ ಕಾರ್ಯಕ್ರಮ ನಿರೂಪಿಸಿದರು.


























