ಪುತ್ತೂರು : ಕಡಬದಿಂದ ಆಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು,ಈ ಬಗ್ಗೆ ವಿದ್ಯಾರ್ಥಿಗಳ ತಂಡವೊಂದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಮಾಡಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು.

ವಿದ್ಯಾರ್ಥಿಗಳ ಸಂಕಷ್ಟವನ್ನು ಮನಗಂಡ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಈ ಮಾರ್ಗವಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.
ಶಾಸಕರ ಸೂಚನೆಯಂತೆ ಕಡಬ-ಅಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಬಸ್ ಸಂಪರ್ಕಕ್ಕೆ ವಿದ್ಯಾರ್ಥಿಗಳಾದ ಝೈನುದ್ದೀನ್ ಅಲಂಕಾರು, ಹರಿಶ್ಚಂದ್ರ ಕೆ, ಚರಣ್ ಟಿ ಕೆ, ಮತ್ತು ಶ್ರವಣ್ ರವರು ಮನವಿ ಮಾಡಿದ್ದರು.



























