ವಿಟ್ಲ : ಕುಡ್ತಮುಗೇರು ಎಂ.ಎಚ್. ಶಾಮಿಯಾನ ಮಾಲಕರೊಬ್ಬರಿಗೆ ಸೇರಿದ ಪಿಕಪ್ ವಾಹನ ಕಳುವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ರಂಷನ್ ಯಾನೆ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರೀಸ್, ಮೊಹಮ್ಮದ್ ಅಯೂಬ ಖಾನ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೆ.23 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರಿನಲ್ಲಿ ಶಾಮಿಯಾನ ಸಾಮಾಗ್ರಿಯ ಜೊತೆಗೆ ನಿಲ್ಲಿಸಿದ್ದ ವಾಹನವನ್ನು ಕಳವುಗೈಯಲಾಗಿದ್ದು, ಪಿಕಪ್ ವಾಹನ ಇನ್ನೂ ಪತ್ತೆಯಾಗಿಲ್ಲ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎಚ್. ಇ. ನಾಗರಾಜ್ ಅವರ ಮಾರ್ಗದರ್ಶನದಂತೆ ಸಬ್ ಇನ್ಸ್ಪೆಕ್ಟರ್ ವಿದ್ಯಾ ಕೆ.ಜೆ ಹಾಗೂ ಸಿಬ್ಬಂದಿಗಳಾದ ರಕ್ಷಿತ್ ರೈ,ಅಶೋಕ್, ಹೇಮರಾಜ್ ಪಾಲ್ಗೊಂಡಿದ್ದರು.

























