ಪುತ್ತೂರು : ಈಜಲು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ
ತಸ್ಲೀಮ್ (17) ಮೃತ ಬಾಲಕ.

ತಸ್ಲೀಮ್ ಅ.15 ರಂದು ಸಂಜೆ ಗೆಳೆಯರ ಜೊತೆಗೂಡಿ ಅರಿಕ್ಕಿಲ
ಸಮೀಪದ ಎರಕ್ಕಲ ಎಂಬಲ್ಲಿ ಹೊಳೆಗೆ ಈಜಲು ತೆರಳಿದ್ದ
ವೇಳೆ ಘಟನೆ ಸಂಭವಿಸಿದೆ.
ಬಾಲಕ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ,
ಸ್ಥಳೀಯರಿಗೆ ವಿಷಯ ತಲುಪಿಸಿದ್ದರು.
ತಕ್ಷಣ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದರಾದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಳಿಕ ಮುಳುಗು ತಜ್ಞರು ಕಾರ್ಯಾಚರಣೆ ಮುಂದುವರಿಸಿದ್ದರು. ಆದರೂ ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಹುಡುಕಾಟ ಮುಂದುವರಿಸಿದಾಗ ಈಜಲು ತೆರಳಿದ್ದ ಸ್ಥಳದ ಸಮೀಪವೇ ಮೃತದೇಹ ಪತ್ತೆಯಾಗಿದೆ.


























