ಬಂಟ್ವಾಳ : ಜಾಗದ ವಿಚಾರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವೀರಕಂಭ ನಿವಾಸಿ ರವಿಶಂಕರ (43) ಎಂಬವರು ನೀಡಿದ ದೂರಿನ ಮೇರೆಗೆ ಗೋಡ ಫ್ರೀ ಪಾಷಾಣ, ರೂಪಾ ಪ್ರಿಯಾ ಡಿಸೋಜ್, ಗ್ಲೇನ್ ಷಾ ರಿಷಾನ, ಗ್ಲೇಷನ್ ಪಾಷಾ ವಿರುದ್ಧ ಪ್ರಕರಣ ದಾಖಲಾಗಿದೆ.
ಅ.15 ರಂದು ಮಧ್ಯಾಹ್ನ ರವಿಶಂಕರ ರವರ ಪತ್ನಿಯ ಹೆಸರಿನಲ್ಲಿ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದಲ್ಲಿರುವ ಜಮೀನಿಗೆ ಆರೋಪಿತರಾದ
ಗೋಡ ಫ್ರೀ ಪಾಷಾಣ, ರೂಪಾ ಪ್ರಿಯಾ ಡಿಸೋಜ್, ಗ್ಲೇನ್ ಷಾ ರಿಷಾನ, ಗ್ಲೇಷನ್ ಪಾಷಾ ಎಂಬವರುಗಳು ಅಕ್ರಮ ಪ್ರವೇಶ ಮಾಡಿ, ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೆಲಸಗಾರರ ಪೈಕಿ ರಾಮಕಾಂತ (29) ಎಂಬವರ ಮೇಲೆ ಕೊಲೆ ಮಾಡುವ ಉದ್ದೇಶದಿಂದ ತೀವ್ರವಾಗಿ ಹಲ್ಲೆ ನಡೆಸಿರುತ್ತಾರೆ ಹಾಗೂ ಬಳಿಕ ಕೊಲೆ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 118/2023, ಕಲಂ:. 447, 307,504, 427, 506 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























