ಇಂಡಿಯಾ-ಪಾಕ್ ಪಂದ್ಯದ ವೇಳೆ ಬಿ-ಟೌನ್ ಬೆಡಗಿ ಊರ್ವಶಿ ರೌಟೇಲಾ 24 ಕ್ಯಾರೆಟ್ ಗೋಲ್ಡ್ ಐಫೋನ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ನಟಿ ಫ್ಯಾನ್ಸ್ ಜೊತೆ ಸಹಾಯವನ್ನು ಕೇಳಿದ್ದಾರೆ.
ಅಕ್ಟೋಬರ್ 14ರಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂ ಕುತೂಹಲತೆಯಿಂದ ಕೂಡಿದ ಇಂಡಿಯಾ-ಪಾಕ್ ಪಂದ್ಯಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ರೋಹಿತ್ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದರು. ಭಾರತ ತಂಡದ ಜಯವನ್ನು ಕಣ್ಣಾರೆ ಆನಂದಿಸಲು ಊರ್ವಶಿ ರೌಟೇಲಾ ಸ್ಟೇಡಿಯಂಗೆ ಬಂದಿದ್ದರು. ಆದರೆ ಈ ವೇಳೆ 24 ಗೋಲ್ಡ್ ಕ್ಯಾರೆಟ್ ಗೋಲ್ಡ್ ಐಫೊನ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದು ಹಾಕಿದ್ದಾರೆ.
ಇನ್ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದು ಹಾಕಿದ ನಟಿ ಊರ್ವಶಿ ರೌಟೇಲಾ, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ಗೋಲ್ಡ್ ಐಫೊನ್ ಕಳೆದು ಹೋಗಿದೆ. ಯಾರಿಗಾದರು ಅದು ಸಿಕ್ಕಿದರೆ ದಯವಿಟ್ಟು ಸಹಾಯ ಮಾಡಿ. ನನ್ನನ್ನು ಸಂಪರ್ಕಿಸಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮೋದಿ ಸ್ಟೇಡಿಯಂ ಮತ್ತು ಅಹಮದಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

























