ವಿಟ್ಲ : ಯಾರೋ ಕಿಡಿಗೇಡಿಗಳು ದನದ ಕಿವಿ ಕತ್ತರಿಸಿ ರಸ್ತೆ ಬದಿ ಬಿಸಾಕಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಇಂದು ಬೆಳಿಗ್ಗೆ ವೀರಕಂಭ ಗ್ರಾಮದ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ಕತ್ತರಿಸಿದ ದನದ ಕಿವಿ ಮತ್ತು ಚರ್ಮ ಪತ್ತೆಯಾಗಿದ್ದು, ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಕೃತ್ಯದ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




























