ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ.., ಅದರಲ್ಲೂ ಕರಾವಳಿಯಲ್ಲಂತೂ ಹುಲಿಗಳದ್ದೇ ಅಬ್ಬರ.. ಇನ್ನೆರಡು ದಿನಗಳಲ್ಲಿ ಹುಲಿಗಳು ಮುತ್ತಿನ ನಗರಿ ಪುತ್ತೂರಿನಲ್ಲಿ ಘರ್ಜಿಸಲಿವೆ.
ಹುಲಿವೇಷ ಕುಣಿತ, ತುಳುನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ, ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ “ಪುತ್ತೂರ್ದ ಪಿಲಿಗೊಬ್ಬು-2023” ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಅ.22 ರಂದು ನಡೆಯಲಿದೆ.
ಜೊತೆಗೆ ವಿಶೇಷವಾಗಿ “ಫುಡ್ ಫೆಸ್ಟ್” ನಡೆಯಲಿದ್ದು, ರುಚಿಕರ ಖಾದ್ಯಗಳ ಮಳಿಗೆ ಆಹಾರ ಪ್ರಿಯರನ್ನು ಆಕರ್ಷಿಸಲಿವೆ.
ಕಾರ್ಯಕ್ರಮಕ್ಕೆ ತಾರ ಮೆರೆಗು :
“ಪುತ್ತೂರ್ದ ಪಿಲಿಗೊಬ್ಬು-2023” ಕಾರ್ಯಕ್ರಮದಲ್ಲಿ ತುಳುನಾಡಿನ ಹೆಸರಾಂತ ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನಟ ನಟಿಯರು ಭಾಗವಹಿಸಲಿದ್ದಾರೆ.
ಅದರಲ್ಲೂ ‘ಗರುಡಗಮನ ವೃಷಭವಾಹನ’, ‘ಒಂದು ಮೊಟ್ಟೆಯ ಕಥೆ’, ‘ಟೋಬಿ’ ಖ್ಯಾತಿ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’, ಖ್ಯಾತಿಯ ನಟ, ದೂದ್ ಪೇಡಾ ಎಂದೇ ಖ್ಯಾತಿಗಳಿಸಿರುವ ದಿಗಂತ್ ರವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಈಗಾಗಲೇ ಭರದಿಂದ ಸಿದ್ಧತೆ ನಡೆಯುತ್ತಿದೆ.



























