ಹೆಮ್ಮೆಯ ಇಸ್ರೋ ಮಾನವ ರಹಿತ ಟೆಸ್ಟ್ ಫ್ಲೈಟ್ ಮಿಷನ್ ಅನ್ನು ಲಾಂಚ್ ಮಾಡಿದ್ದು, ಇದೀಗ ಆಕಾಶದತ್ತ ಚಿಮ್ಮಿದ ಟಿವಿ-ಡಿ1 ಮಿಷನ್ 8 ನಿಮಿಷದ ಬಳಿಕ ಮಾಡ್ಯೂಲ್ ಎಸ್ಕೇಪ್ ಸಿಸ್ಟಮ್ ಪ್ಯಾರಾಚೂಟ್ ಮೂಲಕ ಸಮುದ್ರಕ್ಕೆ ಇಳಿದಿದೆ.
ಅಂದಹಾಗೆಯೇ ಭೂಮಿಯಿಂದ ಟಿವಿ-ಡಿ1 ರಾಕೆಟ್ 16.6 ಕಿಮೀ ಎತ್ತರಕ್ಕೆ ಹೋದ ಬಳಿಕ ಸಿಬ್ಬಂದಿ ಮಾಡ್ಯೂಲ್ ಆಟೋಮ್ಯಾಟಿಕ್ ಆಗಿ ಪ್ರತ್ಯೇಕಗೊಂಡಿದೆ.
ಗಗನಯಾನಿ ಸಿಬ್ಬಂದಿ ಇರಬೇಕಾಗಿದ್ದ ಮಾಡ್ಯೂಲ್ ಸಮುದ್ರಕ್ಕೆ ಇಳಿಯುವ ದೃಶ್ಯವನ್ನು ಇಸ್ರೋ ಪ್ರತ್ಯೇಕವಾಗಿ ಬಿತ್ತರಿಸಿದೆ.
ಇಸ್ರೋ 2025ರಲ್ಲಿ ಮಾನವ ಸಹಿತ ಗಗನಯಾನ ಕೈಗೊಳ್ಳುವ ಯೋಜನೆ ಹಾಕಿಕೊಂಡಿದೆ. ಇದರ ಸಲುವಾಗಿ ಇಂದು ಅದರ ಪರೀಕ್ಷೆ ನಡೆಸಿ ಸಕ್ಸಸ್ ಆಗಿದೆ. ಚಂದ್ರಯಾನ-3 ಸಕ್ಸಸ್ ಬಳಿಕ ರಾಷ್ಟ್ರೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾನ ಟೆಸ್ಟ್ ವಿಚಾರದಲ್ಲೂ ಜಯ ಕಂಡಿದೆ. ಇದು ಭಾರತಕ್ಕೆ ಮತ್ತೊಂದು ಹೆಮ್ಮೆಯ ವಿಚಾರವಾಗಿದೆ. ಅನೇಕರು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.