ವಿಟ್ಲ : ವಿಠಲ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಶಿಬಿರದ ಸಮಾರೋಪ ಸಮಾರಂಭವು ಬೊಳಂತಿಮೊಗರಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಪ್ರಾಚಾರ್ಯ ಆದರ್ಶ್ ಚೊಕ್ಕಡಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಟ್ಟಣ ಪಂಚಾಯತ್ ಸದಸ್ಯರಾದ ಕರುಣಾಕರ ನಾಯ್ತೋಟು ಮಾತನಾಡಿ, 7 ದಿನಗಳ ಶಿಬಿರದ ಅನುಭವ ಮುಂದಿನ ಜೀವನಕ್ಕೆ ದಾರಿ ದೀಪವಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರಂದರ ಅಂಚನ್, ಉಪಾಧ್ಯಕ್ಷ ಹನೀಫ್ ಸ ಅ ದಿ, ಶಿಕ್ಷಣ ತಜ್ಞ ವಿಶ್ವ ನಾಥ್ ನಾಯ್ತೋಟ್ಟು, ಮುಖ್ಯ ಶಿಕ್ಷಕ ಸಂಜೀವ ಎಚ್, ಹರೀಶ್ ಮಾಡ ಅಧ್ಯಕ್ಷರು ಧ.ಗ್ರಾ.ಅ.ಯೋ. ನಿತ್ಯಾನಂದ ನಾಯಕ್ ಸದಸ್ಯರು ವಿಠಲ ಎಜುಕೇಶನ್ ಸೊಸೈಟಿ, ವಿನೂತನ ಯವಕ ಮಂಡಲದ ಅಧ್ಯಕ್ಷರಾದ ಕಿರಣ್ ಮಾಡ್ತೇಲು, ಪ್ರಶಾಂತ್ ಚೊಕ್ಕಡಿ, ಕುಸುಮ, ಯಶೋಧ ಉಪಸ್ಥಿತರಿದ್ದರು.
ಉಪನ್ಯಾಸಕಿ ಜಲಜಾಕ್ಷಿ ಸ್ವಾಗತಿಸಿದರು. ಶಿರಾಧಿಕಾರಿ ಅಣ್ಣಪ್ಪ ಸಾಸ್ತಾನ ವಂದಿಸಿದರು, ವಿದ್ಯಾರ್ಥಿನಿ ಸುಮನ ನಿರ್ವಹಿಸಿದರು. ಲಕ್ಷ್ಮಿ ಅದರ್ಶಿನಿ, ಹೇಮಾ ಪ್ರಾರ್ಥನೆಗೈದರು.



























