ಬೆಂಗಳೂರು : ಕಳ್ಳರು ಚಾಪೆ ಕೆಳಗೆ ನುಸುಳಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿ ಹಿಡಿಯುತ್ತಾರೆ ಅನ್ನೋದು ಆಗಾಗ ಸಾಬೀತಾಗುತ್ತಲೇ ಇದೆ. ಅದರಲ್ಲೂ ಏರ್‌ಪೋರ್ಟ್‌ಗಳಲ್ಲಿ ಕಳ್ಳರ ಖತರ್ನಾಕ್ ಐಡಿಯಾಗಳು ಒಂದೂ ಎರಡಲ್ಲ. ಖದೀಮರು ಸಿಕ್ಕಿಬಿದ್ದಾಗಲೆ ಅವರ ಕಿಲಾಡಿ ಪ್ಲಾನ್ ಏನು ಅನ್ನೋದು ಬಯಲಾಗುತ್ತೆ.

ಪ್ರತಿನಿತ್ಯ ದೇಶದ ಹಲವು ವಿಮಾನ ನಿಲ್ದಾಣದಲ್ಲಿ ಸ್ಮಗ್ಲಿಂಗ್ ಅಪರಾಧಿಗಳು ಸಿಕ್ಕಿಬೀಳುತ್ತಲೇ ಇರುತ್ತಾರೆ. ಕಳ್ಳ ಸಾಗಾಣಿಕೆಗೆ ಏರ್‌ಪೋರ್ಟ್‌ನಲ್ಲಿ ಇವರು ಮಾಡೋ ಖತರ್ನಾಕ್ ಐಡಿಯಾಗಳು ಒಂದು, ಎರಡಲ್ಲ. ಇದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿರುವ ಈ ಚಿನ್ನವೇ ಸಾಕ್ಷಿ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಕಸ್ಟಮ್ಸ್ ಅಧಿಕಾರಿಗಳು ಖತರ್ನಾಕ್ ಕಿಲಾಡಿಗಳ ಜಾಲವನ್ನು ಬೇಧಿಸಿದ್ದಾರೆ.
ಡ್ರೈ ಫ್ರೂಟ್ಸ್‌ನಲ್ಲಿ ಚಿನ್ನವನ್ನು ಮಿಶ್ರಣ ಮಾಡಿ ಕಳ್ಳ ಸಾಗಣೆ ಮಾಡುತ್ತಿದ್ದವರನ್ನ ಬಂಧಿಸಿದ್ದಾರೆ. ನಿನ್ನೆ ಹಾಗೂ ಇಂದು ಒಟ್ಟು ಮೂರು ಕೇಸ್‌ಗಳಲ್ಲಿ 67 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 133 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದ ಇಬ್ಬರು ನಾಗರಿಕರು, ಮಲೇಷ್ಯಾದ ಓರ್ವ ಪ್ರಯಾಣಿಕನನ್ನು ಬಂಧಿಸಲಾಗಿದೆ.
An innovative approach to smuggling at @BLRAirport! Despite the daily efforts of DRI to apprehend them, smugglers keep finding new methods. Is our law enforcement not effective enough in combating these activities? 🕵️♂️🛫 #GoldSmuggling #Gold #Smuggling
— Citizens Movement, East Bengaluru (@east_bengaluru) October 21, 2023
pic.twitter.com/pxBCC4lWCy



























