ಬೆಂಗಳೂರು : ಆಕೆ ಇನ್ನೂ ಬಾಳಿ ಬದುಕ ಬೇಕಾದ ಹುಡುಗಿ.. ಅದ್ರೆ ಕಾಲೇಜು ಓದುವಾಗಲೇ ಪ್ರೀತಿ ಪ್ರೇಮದ ಹುಚ್ಚಿಗೆ ಬಿದ್ದು ತಂದೆ ತಾಯಿ ಬುದ್ಧಿ ಮಾತನ್ನ ಹೇಳಿದ್ರೂ ಕೂಡ ಕೇಳಿರಲಿಲ್ಲ. ಈಕೆಯ ವರ್ತನೆಗೆ ತಂದೆ ಬೇಸತ್ತು ಹೋಗಿದ್ದ. ಮರ್ಯಾದೆಗೆ ಅಂಜಿದವನು ಮಾಡಿದ್ದು ಎಂಥಾ ಘನಘೋರ ಕೃತ್ಯ..!?
ಇಲ್ಲಿ ಮೊಗ್ಗು ಅರಳುವ ಮುನ್ನವೇ ಬಾಡಿ ಹೋಗಿದೆ. ಪ್ರೀತಿ ಪ್ರೇಮ, ಪ್ರಣಯದ ಗುಂಗಲ್ಲಿ ತೇಲುತ್ತಿದ್ದ ಹುಡುಗಿಯ ಬಾಳು ದುರಂತ ಅಂತ್ಯ ಕಂಡಿದೆ.
ತಂದೆ ತಾಯಿ ಮಕ್ಕಳಿಂದ ಒಳ್ಳೆಯ ಹೆಸರನ್ನ ನಿರೀಕ್ಷಿಸುವುದು ತಪ್ಪಲ್ಲ. ಆ ನಿರೀಕ್ಷೆ ಹುಸಿಯಾದ್ರೆ ಮಕ್ಕಳನ್ನ ಕೊಂದು ಬಿಡುವ ನಿರ್ಧಾರಕ್ಕೆ ಬರೋದು ತಪ್ಪು. ದುರಂತ ಅಂದ್ರೆ ಬೆಂಗಳೂರಲ್ಲಿ ಒಂದು ಮಾರ್ಯಾದಾ ಹತ್ಯೆ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ ನಡೀತು ಮರ್ಯಾದಾ ಹತ್ಯೆ..!!
ಹೆಸರು ಪಲ್ಲವಿ ಜೀವನದಲ್ಲಿ ಸವಿಸಬೇಕಾದ ದಿನಗಳಿಗೆ ಬರವಿರಲಿಲ್ಲ. ಆಕೆಗೆ ಕೇವಲ 17 ವರ್ಷ ಅಷ್ಟೇ., ಮೂಲತ ಹೆಚ್ಡಿ ಕೋಟೆಯ ಈ ಪಲ್ಲವಿ, ಕಾಲೇಜಲ್ಲಿ ಓದುತ್ತಿದ್ದಾಗ್ಲೇ ಪ್ರೀತಿ, ಪ್ರೇಮ ಅಂತ ಜಾರಿಬಿದ್ದಿದ್ಲು. ಈ ವಿಚಾರ ಗೊತ್ತಾಗ್ತಿದ್ದಂತೆ ತಂದೆ ಗಣೇಶ್ ಮತ್ತು ತಾಯಿ ಶಾರದಾ ಶಾಕ್ ಆಗಿದ್ರು. ಮಗಳಿಗೆ ಎಚ್ಚರಿಕೆ ಕೊಟ್ಟು ಸುಮ್ಮನಿದ್ರು. ಆದ್ರೆ, ಪ್ರೀತಿಯಲ್ಲಿ ಬಿದ್ದ ಮಗಳು ಮತ್ತಷ್ಟು ಜಿದ್ದಿಗೆ ಬಿದ್ದಿದ್ಲು. ಊರಲ್ಲೇ ಇದ್ರೆ ಇದು ಇನ್ನೂ ಹೆಚ್ಚಾಗುತ್ತೆ ಅಂತ ಬೆಂಗಳೂರಿಗೆ ಕಳುಹಿಸಿದ್ರು.
ಮರ್ಯಾದೆಗೆ ಬಿತ್ತು ಹೆಣ!
- ಊರಿಂದ ದೂರಾದ್ರೆ ಇವೆಲ್ಲ ಬಿಡಬಹುದು ಅನ್ನೋ ಅಲೋಚನೆ
- ಪಲ್ಲವಿಯನ್ನ ನಾಗನಾಥಪುರದಲ್ಲಿದ್ದ ಮಾವನ ಮನೆಗೆ ಕಳುಹಿಸಿದ್ರು
- ಅಕ್ಟೋಬರ್ 14 ರಂದು ಮಾವನ ಮನೆಯಿಂದ ಪಲ್ಲವಿ ನಾಪತ್ತೆ
- 20ನೇ ತಾರೀಖಿನಂದು ಯುವತಿಯನ್ನ ಪತ್ತೆ ಹಚ್ಚಿದ್ದ ಪೊಲೀಸರು
- ಪಲ್ಲವಿಯನ್ನ ಮತ್ತೆ ಮಾವ ಶಾಂತಕುಮಾರ್ ಮನೆಗೆ ಕಳುಹಿಸಿದ್ರು
- ನಿನ್ನೆ ಬೆಳಿಗ್ಗೆ ಮನೆಗೆ ಬಂದ ಪಲ್ಲವಿಯ ತಂದೆ, ಪತ್ನಿ ಶಾರದಾ, ಪಲ್ಲವಿ ಜೊತೆ ಗಲಾಟೆ ಆಗಿದೆ.
- ಎಷ್ಟು ಹೇಳಿದ್ರೂ ಕೇಳ್ತಿಲ್ಲ, ಮರ್ಯಾದೆ ಹೋಗ್ತಿದೆ ಎಂದು ಗಲಾಟೆ
- ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದ ತಂದೆ-ಮಗಳ ಜಗಳ
ಜಗಳ ವಿಕೋಪಕ್ಕೆ ತಿರುಗ್ತಿದ್ದಂತೆ ಮನೆಯಲ್ಲಿದ್ದ ಮಚ್ಚನ್ನ ಗಣೇಶ್ ತೆಗೆದಿದ್ದ. ಮಚ್ಚಿನಿಂದ ಮಗಳು ಪಲ್ಲವಿಯನ್ನ ಕೊಚ್ಚಿ ಹತ್ಯೆ ಮಾಡಿದ್ದ. ಬಿಡಿಸಲು ಬಂದ ಪತ್ನಿ ಶಾರದಾ ಹಾಗೂ ಬಾಮೈದ ಶಾಂತಕುಮಾರ್ ಮೇಲೆ ಕೂಡ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ರು. ಮರ್ಯಾದೆಗೆ ಅಂಜಿ ಹೆತ್ತಮಗಳನ್ನ ಹತ್ಯೆಗೈದಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ..

























