ಬೆಂಗಳೂರು : ಇಬ್ಬರು ಬಂದರು. ಒಬ್ಬ ಬೈಕ್ ಮೇಲೆ ಕೂತಿದ್ದ. ಮತ್ತೋರ್ವ ಕಾರಿನ ಬಳಿ ಹೋದ. ಕಾರಿನ ಗ್ಲಾಸ್ ಇಳಿಸಿ ಅದರೊಳಗೆ ನುಗ್ಗೇ ಬಿಟ್ಟ. ಆಗ ಕಳ್ಳನಿಗೆ ಒಂದು ಬ್ಯಾಗ್ ಸಿಕ್ತು. ಅದನ್ನ ಕದ್ದ ಕಳ್ಳ, ಇನ್ನೊಬ್ಬನ ಜೊತೆ ಬೈಕ್ ಏರಿ ಪರಾರಿಯಾಗಿದ್ದಾನೆ. ಹೀಗೆ ಕಳ್ಳರು ಕದ್ದೊಯ್ದಿರೋ ಬ್ಯಾಗಲ್ಲಿ ಇದ್ದಿದ್ದು ಬರೊಬ್ಬರಿ 13 ಲಕ್ಷ ರೂಪಾಯಿ.
ಈ ಕಳ್ಳತನ ನಡೆದಿರೋದು ಆನೇಕಲ್ ತಾಲೂಕಿನ ಸರ್ಜಾಪುರದ ಸೋಂಪುರದಲ್ಲಿ.
ಸಬ್ ರಿಜಿಸ್ಟರ್ ಕಚೇರಿ ಮುಂಭಾಗ ಆನೇಕಲ್ ತಾಲೂಕಿನ ಹೊನ್ನಕಳಸಾಪುರದ ಬಾಬು ಎಂಬುವರು ತಮ್ಮ ಬಿಎಂಡಬ್ಲೂ ಕಾರನ್ನ ನಿಲ್ಲಿಸಿದ್ರು. ಅದನ್ನ ನೀಟ್ ಆಗಿ ಅಬ್ಸರ್ವ್ ಮಾಡಿದ್ದ ಕಳ್ಳರು ಕಾರಿನ ಗಾಜು ಹೊಡೆದು 13 ಲಕ್ಷ ರೂಪಾಯಿ ಎಗರಿಸಿಬಿಟ್ಟಿದ್ದಾರೆ.
ಬೈಕ್ನಲ್ಲಿ ಬಂದಿದ್ದ ಇಬ್ಬರು ಖದೀಮರು ಈ ಕೃತ್ಯ ಎಸಗಿದ್ದು, ಕಳ್ಳರ ಕೈಚಳಕಕ್ಕೆ ಸಿಸಿಟಿವಿ ದೃಶ್ಯಗಳೇ ಸಾಕ್ಷಿಯಾಗಿವೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ. ಸದ್ಯ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


























