ಧರ್ಮಸ್ಥಳ : ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಆನ್ಲೈನ್ ಜಾಬ್ ಆಫರ್ ಕೊಟ್ಟು ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಮಹಿಳೆಯೋರ್ವರು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಧರ್ಮಸ್ಥಳ ಕಾಯರ್ತ್ತಡ್ಕ ನಿವಾಸಿ ಮಹಿಳೆಯೋರ್ವರಿಗೆ ಅ.9 ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ಆನ್ ಲೈನ್ ಜಾಬ್ ಆಫರ್ ಕೊಟ್ಟಿದ್ದು, ಅದರಂತೆ ಮಹಿಳೆ ಕೆಲಸ ಪ್ರಾರಂಭಿಸಿರುತ್ತಾರೆ.
ಆ ಬಳಿಕ ಅಪರಿಚಿತರು ಮಹಿಳೆಗೆ ವಿವಿಧ ಕಾರಣಗಳನ್ನು ತಿಳಿಸಿ, ಸದ್ರಿಯವರಿಂದ ಒಟ್ಟು ರೂ 4,25,934/ ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 85/2023 ಕಲಂ : 419, 420 ಐ ಪಿ ಸಿ 66(ಸಿ) 66(ಡಿ) ಐ ಟಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























