ಪುತ್ತೂರು : ವಿವಾಹಿತ ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಆಯಿಷಾ ರವರ ತಂದೆ ಜೈನುದ್ದಿನ್ ನೀಡಿದ ದೂರಿನ ಮೇರೆಗೆ ಪತಿ ಸಲೀಂ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾವು ಸಮೀಪದ ಅಮ್ಚಿನಡ್ಕ ಮೂಕಾರಿಮೂಲೆ ನಿವಾಸಿ ಜೈನುದ್ದೀನ್ ರವರ ಚಿಕ್ಕ ಮಗಳಾದ ಆಯಿಷಾ ರನ್ನು 24/06/2021 ರಂದು ಒಳಾಲಿನ ಅಹಮ್ಮದ್ ರವರ ಮಗ ಸಲೀಂ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ಆಯಿಷಾಳ ಗಂಡ ಸಲೀಂನು ಪುತ್ತೂರಿನಲ್ಲಿ ಟೈಲರ್ ಕೆಲಸಕ್ಕೆ ಹೋಗುತ್ತಿದ್ದು ಆದರೆ ಕಳೆದ 4 ತಿಂಗಳ ಹಿಂದೆ ಬೆಂಗಳೂರಿನ ಸೂಪರ್ ಮಾರ್ಕೆಟ್ ಕೆಲಸಕ್ಕೆ ಸೇರಿದ್ದು, ಅಳಿಯ ಸಲೀಮನು ಬೆಂಗಳೂರಿಗೆ ಹೋದಾಗ ಆಯಿಷಾಳು ಹೆಚ್ಚಾಗಿ ತಂದೆಯ ಮನೆಯಲ್ಲಿ ವಾಸವಿದ್ದರು.
ಕಳೆದ 20 ದಿನಗಳ ಹಿಂದೆ ಆಯಿಷಾಳು ತನ್ನ ಗಂಡನ ಮನೆಯಲ್ಲಿರುತ್ತಾಳೆ. ಒಂದು ತಿಂಗಳ ಹಿಂದೆ ತಂದೆಯ ಮನೆಗೆ ಬಂದಿರುತ್ತಾಳೆ. 22-10-2023 ರಂದು ಆಯಿಷಾಳು ದೊಡ್ಡ ಅಕ್ಕನೊಂದಿಗೆ ಬೆಂಗಳೂರಿಗೆ ಹೋಗಿದ್ದು. 25-10-2023 ರಂದು ಆಯಿಷಾಳು ಅಕ್ಕನೊಂದಿಗೆ ಬೆಂಗಳೂರಿನಿಂದ ಮರಳಿ ಮನೆಗೆ ಬಂದಿದ್ದು, ಅಕ್ಕ ತನ್ನ ಗಂಡನ ಮನೆಗೆ ಹೋಗಿದ್ದು. ನಂತರ ಆಯಿಷಾಳು ತುಂಬಾ ಬೇಜಾರಿನಲ್ಲಿದ್ದವಳು ತನ್ನ ಮೊಬೈಲ್ ನಿಂದ ನಿರಂತರವಾಗಿ ಸಂಜೆಯ ತನಕ ತನ್ನ ಗಂಡನೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದರು.
ಜೈನುದ್ದೀನ್ ಸಂಜೆ ನಮಾಜಿಗೆ ತೆರಳಿದಾಗ ಮನೆಯಲ್ಲಿ ಹೆಂಡತಿ, ಸಣ್ಣ ಮಗನ ಹೆಂಡತಿ ಮತ್ತು ಆಯಿಷಾಳು ಇದ್ದು, ರಾತ್ರಿ ವೇಳೆ ಹೆಂಡತಿ ಕರೆ ಮಾಡಿ ಮನೆಗೆ ಬರಲು ತಿಳಿಸಿದ್ದು, ಕೂಡಲೇ ಮನೆಗೆ ಬಂದಾಗ ಆಯಿಷಾಳು ಮನೆಯಲ್ಲಿ ಕಾಣದೇ ಇದ್ದು, ಈ ವೇಳೆ ಹೆಂಡತಿ ಮನೆಯಲ್ಲಿ ನಮಾಜ್ ಮಾಡುವ ಸಮಯ ಮನೆಯ ಅಂಗಳದ ಬಾವಿಯಲ್ಲಿ ಶಬ್ಧ ಬಂದಿರುವ ಬಗ್ಗೆ ತಿಳಿಸಿದಾಗ ಹೋಗಿ ಬಾವಿಯನ್ನು ನೋಡಲಾಗಿ ಮಗಳು ಬಾವಿಯಲ್ಲಿ ಮೃತಪಟ್ಟಿರುವುದು ಕಂಡು ಬರುತ್ತದೆ.
ಈ ವಿಷಯವನ್ನು ಮಗ ಆಯಿಷಾಳ ಗಂಡ ಸಲೀಮನಿಗೆ ದೂರವಾಣಿ ಮೂಲಕ ತಿಳಿಸಿದ್ದು, ಮತ್ತೊಮ್ಮೆ ಕರೆ ಮಾಡಿದಾಗ ಸಲೀಮನು ಮೊಬೈಲ್ ಸ್ವಿಚ್ ಆಪ್ ಮಾಡಿರುತ್ತಾನೆ. 22-10-2023 ರಂದು ಮಗಳು ಬೆಂಗಳೂರಿಗೆ ಹೋದ ಸಮಯ ಸಲೀಮ್ ಅವಳಿಗೆ ಕಿರುಕುಳ ನೀಡಿದ್ದು, ನಂತರ ದಿನಾಂಕ 25-10-2023 ರಂದು ಬೆಳಗ್ಗೆ ಮನೆಗೆ ಬಂದ ಮೇಲೆ ದೂರವಾಣಿಯ ಮೂಲಕ ನಿರಂತರವಾಗಿ ಕಿರುಕುಳ ನೀಡಿ ಸಾವಿಗೆ ಪ್ರೇರೇಪಿಸಿ ಆಯಿಷಾಳು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಆಯಿಷಾಳ ಗಂಡ ಮಾನಸಿಕ, ದೈಹಿಕ ಕಿರುಕುಳ ಹಿಂಸೆ ನೀಡಿದ್ದೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಕಲಂ: 498A,306 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.


























