ವಿಟ್ಲ : ಯುವಕರ ತಂಡವೊಂದು ಬಡ ಕುಟುಂಬಗಳ ಸಂಕಷ್ಟಕ್ಕೆ ಮಿಡಿಯುವ ಮೂಲಕ ಮಾನವೀಯತೆ ಮೆರೆದಿದೆ.

ಸಂದೀಪ್ ಕುಕ್ಕೆಬೆಟ್ಟು ನೇತೃತ್ವದ “ಟೀಂ ಸಂರಕ್ಷಣ್” ತಂಡವು ದಸರಾ ಸಂದರ್ಭದಲ್ಲಿ ವಿಭಿನ್ನ ವೇಷ ಧರಿಸುವ ಮೂಲಕ ಅದರಲ್ಲಿ ಸಂಗ್ರಹವಾದ ಮೊತ್ತವನ್ನು ದೇರೇಬೈಲು ಬಜ್ಪೆಯ ಬಡಕುಟುಂಬದ ಪುಟಾಣಿ ಮಗುವಿನ ಚಿಕಿತ್ಸೆಗೆ ನೀಡುವ ಮೂಲಕ ಹೃದಯವಂತಿಕೆ ಮೆರೆದಿದೆ.
ಮಂಗಳೂರು ತಾಲೂಕಿನ ದೇರೆಬೈಲ್ ಕೊಂಚಾಡಿ ನಿವಾಸಿ ನಿರುಪಮಾ ಎಂಬವರ 2 ತಿಂಗಳ ನವಜಾತ ಶಿಶು (ಟ್ರಾಕಿಯೋಸೋಪೇಜಿಲ್ ಪಿಸ್ಟುಲಾ) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ನಗರದ ಏಜೆ ಹಾಸ್ಪಿಟಲ್ ನಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಮಗುವಿನ ಚಿಕಿತ್ಸೆಗೆ ಸುಮಾರು 6 ಲಕ್ಷ ರೂ. ಖರ್ಚು ಇದ್ದು, ‘ಟೀಂ ಸಂರಕ್ಷಣ್’ ತಂಡವು ಈ ಮಗುವಿಗೆ 52,390 ರೂ. ಹಣವನ್ನು ನೀಡಿದೆ.

ಮಗುವಿನ ಚಿಕಿತ್ಸೆಗಾಗಿ ದಾನಿಗಳ ಸಹಾಯಹಸ್ತ ಬೇಕಾಗಿದೆ.
‘ಟೀಂ ಸಂರಕ್ಷಣ್’ ತಂಡದ ಸದಸ್ಯರು
- ವೇಷದಾರಿ – ಸಂದೀಪ್ ಕುಕ್ಕೆಬೆಟ್ಟು
- ವೇಷ ತಯಾರಕ- ರವಿ ಸಿಂಗೇರಿ
- ಸಹಕಾರ- ಉಮೇಶ್ ನಿಡ್ಯ, ತಿರ್ಥೇಶ್, ರೇವತಿ, ದಿವ್ಯ, ಯತಿಶ್ರೀ, ಗುರುಪ್ರಸಾದ್, ನಿಶ್ಮಿತ, ಕೃಷ್ಣಪ್ರಸಾದ್, ದೀಕ್ಷಿತ್, ರೇಷ್ಮಾ, ಚರಣ್, ಪ್ರಶಾಂತ ಮತ್ತು ಭರತ್
ಕಳೆದ ವರ್ಷವೂ ದಸರಾ ಸಂದರ್ಭ ವಿಭಿನ್ನ ರೀತಿಯ ವೇಷ ಧರಿಸಿದ್ದ ಸಂದೀಪ್ ಕುಕ್ಕೆಬೆಟ್ಟು ಈ ಮೂಲಕ ಬಂದ ಹಣವನ್ನು ಒಕ್ಕೆತ್ತೂರಿನ ಬಡಕುಟುಂಬದ ಮಗುವಿನ ಚಿಕಿತ್ಸೆಗೆ ನೀಡಿತ್ತು.


























