ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರಿಂದ ರಾಷ್ಟ್ರೀಯ ಮಟ್ಟದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ತಂಡ ಯುವ ಚಾಂಪಿಯನ್ ಗಳಾಗಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ತಂಡವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಪೂಜಾರಿ ಬಿರಾವು ಮುನ್ನಡೆಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಜಿತ್ ರೈ,ಸ್ವಾತಿಕ್ ಕೆ,ಸುಜನ್ ಕೆ. ಎನ್,ಬಿ. ಶ್ರೀನಿದೀಶ್,ಧನುಷ್ ರೈ,ರಮ್ಯ ಭಾಗವಹಿಸಲಿದ್ದಾರೆ.
ದೇಶದ ಎಲ್ಲಾ ಭಾಗಗಳಿಂದ ಯುವ ಜನರು ದೆಹಲಿಯಲ್ಲಿ 30 ಮತ್ತು 31 ನೇ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

























