ತಿರುವನಂತಪುರಂ : ಖ್ಯಾತ ಮಲಯಾಳಂ ನಟಿ ರೆಂಜೂಷಾ ಮೆನನ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಟಿ ರೆಂಜೂಷಾ ಮೆನನ್ ಕೇವಲ 35 ವರ್ಷ. ಸಣ್ಣ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದ ರೆಂಜೂಷಾ ತನ್ನ ಕುಟುಂಬದ ಜತೆ ಹಲವು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಇದ್ದರು.
ಅಸಲಿಗೆ ಆಗಿದ್ದೇನು..?
ರಾತ್ರಿ ರೂಮ್ಗೆ ಹೋಗಿ ಮಲಗಿದ್ದ ರೆಂಜೂಷಾ ಇಂದು ಎಷ್ಟೊತ್ತಾದ್ರೂ ಬಾಗಿಲು ತೆಗೆದಿರಲಿಲ್ಲ. ಕಾರಣ ತನ್ನ ಪೋಷಕರಿಗೆ ಅನುಮಾನ ಬಂದಿತ್ತು. ಬಳಿಕ ಹೇಗೋ ರೂಮಿನ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿದೆ.
ಕೇರಳ ಪೊಲೀಸರಿಂದ ತೀವ್ರಗೊಂಡ ತನಿಖೆ
ಸದ್ಯ ಕೇರಳ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರೆಂಜೂಷಾ ಮೆನನ್ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ಮಲಯಾಳಂ ಚಿತ್ರಗಳಲ್ಲೂ ಉತ್ತಮ ಪಾತ್ರಗಳನ್ನು ಮಾಡಿದ್ದರು.
ನಟಿ ರೆಂಜೂಷಾ ಮೆನನ್, ತನ್ನ ಗಂಡ ಮನೋಜ್ ಇಬ್ಬರು ಸಿನಿಮಾ ಕಲಾವಿದರು. ಕಳೆದ ಎರಡು ವರ್ಷಗಳಿಂದ ಅವಕಾಶಗಳು ಸಿಗದೆ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರು. ಸಾಲ ಹೆಚ್ಚಾಗಿದ್ದು, ತೀರಿಸಲಾಗದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುತ್ತಿವೆ ಮೂಲಗಳು.
ಇನ್ನೂ, ಸಾಯುವ ಕೆಲವು ಗಂಟೆಗಳ ಮುನ್ನ ರೆಂಜೂಷ್ ಅವರದ್ದು ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ವೊಂದು ವೈರಲ್ ಆಗಿದೆ. ಅನಿಲ್ ಶ್ರೀದೇವಿ ಎಂಬುವರು ರೆಂಜೂಷ್ ಜತೆ ಫನ್ನೀ ರೀಲ್ಸ್ ಒಂದು ಮಾಡಿ ಶೇರ್ ಮಾಡಿದ್ದರು.

























