ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ದ.ಕ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮೂಡಬಿದಿರೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಮೂಡಬಿದಿರೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ 2023-24 ನಡೆದಿದ್ದು, ಸಂತ ಫಿಲೋಮಿನಾ ಪ್ರೌಢಶಾಲಾ 10ನೇ ತರಗತಿ ವಿದ್ಯಾರ್ಥಿ ನಿಪೇಕ್ಷ್ ಭಾಗವಹಿಸಿ ಬಹುಮಾನ ಪಡೆದಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಾವೆಲಿನ್ ಥ್ರೋ ದಲ್ಲಿ ಚಿನ್ನದ ಪದಕ ಹಾಗೂ ಶಾಟ್ ಪುಟ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ.
ಇವರು ಕಲ್ಲಾರೆ ನಿವಾಸಿ ಚಂದ್ರಶೇಖರ ಹಾಗೂ ಸವಿತಾ ದಂಪತಿ ಪುತ್ರ.


























