ವಿಟ್ಲ : ಎರಡು ದಿನಗಳ ಹಿಂದೆ ಖಾಸಗಿ ಬಸ್ ನಲ್ಲಿ ಬಿದ್ದು ಸಿಕ್ಕಿದ ಚಿನ್ನದ ತಾಳಿಯನ್ನು ಅದರ ವಾರೀಸುದಾರರಿಗೆ ಒಪ್ಪಿಸಲಾಯಿತು.

ಕಾಶೀಮಠ ನಿವಾಸಿ, ಆಟೋ ಚಾಲಕ ತಾರನಾಥ ಎಂಬವರ ಪತ್ನಿಯ ಚಿನ್ನದ ತಾಳಿ ಮಂಗಳೂರಿನಿಂದ ವಿಟ್ಲಕ್ಕೆ ಬರುವ ಖಾಸಗಿ ಬಸ್ ನಲ್ಲಿ ಬಿದ್ದಿದ್ದು, ಅದು ಶ್ರುತಿಕ ಎಂಬವರಿಗೆ ದೊರಕಿತ್ತು.
ಈ ಬಗ್ಗೆ ತಿಳಿದು ವಾರೀಸುದಾರರು ಶ್ರುತಿಕ ರವರಿಂದ ಪಡೆದುಕೊಂಡರು.
ಬಿದ್ದು ಸಿಕ್ಕಿದ ಚಿನ್ನವನ್ನು ಅದರ ವಾರೀಸುದಾರರಿಗೆ ನೀಡುವ ಮೂಲಕ ಶ್ರುತಿಕ ರವರು ಪ್ರಾಮಾಣಿಕತೆ ಮೆರೆದಿದ್ದಾರೆ.


























