ಬೆಂಗಳೂರು : ನಗರದಲ್ಲಿದ್ದ ಮೂರು ಬೀದಿ ನಾಯಿಗಳು ನಿಗೂಢವಾಗಿ ಕಣ್ಮರೆಯಾಗಿದ್ದು, ದಯವಿಟ್ಟು ಹುಡುಕಿಕೊಡಿ ಎಂದು ವ್ಯಕ್ತಿಯೊಬ್ಬರು ಶೇಷಾದ್ರಿಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕುಮಾರಪಾರ್ಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್, ಕಳೆದ ಹತ್ತು ವರ್ಷಗಳಿಂದ ನಾಯಿಗಳಿಗೆ ಊಟ ಹಾಕಿ ನೋಡಿಕೊಳ್ಳುತ್ತಿದ್ದ. ಆದರೇ ಅಕ್ಟೋಬರ್ 4ರ ನಂತರ ಮೂರು ನಾಯಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ. ಹೀಗಾಗಿ ಬೀದಿ ನಾಯಿಗಳಿಗಾಗಿ ನಗರದ ಹಲವೆಡೆ ಪ್ರಕಾಶ್ ಹುಡುಕಾಟ ನಡೆಸಿದ್ದಾರೆ.
ಆದರೇ ಎಷ್ಟೇ ಹುಡುಕಾಡಿದರೂ ನಾಯಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ಹುಡುಕಿಕೊಡಿ ಎಂದು ಠಾಣೆಗೆ ಬಂದಿದ್ದಾರೆ. ಇಲ್ಲಿದ್ದ ಬೀದಿ ನಾಯಿಗಳನ್ನ ಹಿಡಿದು ಬೇರೆಡೆ ಯಾರೋ ಬಿಟ್ಟು ಬಂದಿದ್ದಾರೆ. ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಬಳಿ ಯಾವಾಗಲೂ ಅವು ಇರುತ್ತಿದ್ದವು. ನಾನು ಪ್ರತಿನಿತ್ಯ ಊಟ ಹಾಕಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೆ. ಇದೀಗ ಸ್ಥಳೀಯ ವ್ಯಕ್ತಿ ನಾಯಿಗಳನ್ನ ಬೇರೆಡೆ ತೆಗೆದುಕೊಂಡು ಹೋಗಿ ಬಿಟ್ಟಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ನಾಯಿಗಳನ್ನ ಪತ್ತೆ ಹೆಚ್ಚಬೇಕು. ದೂರು ಪಡೆದು ಎಫ್ಐಆರ್ ದಾಖಲಿಸಿರುವ ಪೊಲೀಸರು ಕಳೆದುಹೋಗಿರುವ ಮೂರು ಬೀದಿ ನಾಯಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.


























