ಬಂಟ್ವಾಳ : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೋರ್ವ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಾಲೆತ್ತೂರು ಮೂಲದ ಯುವತಿಯೊಬ್ಬಳಿಗೆ ಇಸ್ಟಾದಲ್ಲಿ ಹುಡುಗಿಯ ಹೆಸರಿನಲ್ಲಿ ಕೇರಳ ಮೂಲದ ಯುವಕ ಪರಿಚಯವಾಗಿದ್ದು, ಆತ್ಮೀಯತೆ ಬೆಳೆದು ದೈಹಿಕ ಸಂಬಂಧದ ಹಂತಕ್ಕೆ ತಲುಪಿದೆ. ಇದೇ ರೀತಿಯಲ್ಲಿ ಪಕ್ಕದ ಮನೆಯ ಯುವತಿಗೂ ಈ ವ್ಯಕ್ತಿಯ ಪರಿಚಯವಾಗಿದೆ. ಇಬ್ಬರು ಯುವತಿಯರು ತಮ್ಮ ವಿಚಾರ ಹಂಚಿಕೊಂಡಾಗ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕ ಒಬ್ಬನೇ ಎಂಬುದು ಬೆಳಕಿಗೆ ಬಂದಿದೆ.
ಇಬ್ಬರ ಜೊತೆಗೂ ದೈಹಿಕ ಸಂಪರ್ಕ ನಡೆಸಿದ ಯುವಕನ ವಿರುದ್ಧ ಕೆಲವು ದಿನಗಳ ಹಿಂದೆ ಯುವತಿ ಮನೆಯವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

























