ಬೆಂಗಳೂರು : ಪತಿ- ಪತ್ನಿ ಜಗಳದ ರಾಜಿ ಪಂಚಾಯತಿ ವೇಳೆ ಮಾರಾಮಾರಿ ನಡೆದ ಘಟನೆ ಬೆಂಗಳೂರಿನ ಆರ್ ಟಿ ನಗರದ ಗಣೇಶ ಬ್ಲಾಕ್ ನಲ್ಲಿ ನಡೆದಿದೆ.
ಪತಿ ಮತ್ತವರ ಕುಟುಂಬ ಪತ್ನಿಯ ಕಡೆಯವರಿಗೆ ಸರಿಯಾಗಿ ಥಳಿಸಿರುವುದು ಬೆಳಕಿಗೆ ಬಂದಿದೆ.
ಗಂಡ-ಹೆಂಡತಿ ಮದುವೆಯಾಗಿ ಎರಡು ವರ್ಷದ ಕಳೆದರು ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಪತಿ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಪ್ರತಿದಿನ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು. ಈ ಮನಸ್ತಾಪ ಹಿನ್ನೆಲೆ ಕೆಲ ದಿನಗಳಿಂದ ಪತ್ನಿ ತವರು ಮನೆಯಲ್ಲಿದ್ದಳು.
ನಿನ್ನೆ ರಾತ್ರಿ ಸುಮಾರು ಹದಿನೈದು ಜನ ಪತ್ನಿ ಕಡೆಯವರು ಆರ್ ಟಿ ನಗರದ ಪತಿ ಮನೆಗೆ ಬಂದಿದ್ದು, ಎರಡು ಮನೆಯವರು ರಾಜಿ ಪಂಚಾಯತಿ ಮಾಡುತ್ತಿದ್ರು. ಈ ವೇಳೆ ಗಲಾಟೆ ಆಗಿ, ಎರಡು ಕುಟುಂಬಗಳು ಪರಸ್ಪರ ಬಡಿದಾಡಿಕೊಂಡಿವೆ. ಆದರೆ ಎರಡು ಕಡೆಯವರು ಆರ್ ಟಿ ನಗರ ಪೊಲೀಸ್ ಠಾಣೆ ಗೆ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದೆ ಇಬ್ಬರನ್ನು ಕೂರಿಸಿ ರಾಜಿ ಪಂಚಾಯತಿ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.


























