ಕಡಬ : ಗಂಡ-ಹೆಂಡತಿ ಜಗಳ ವಿಪರೀತಕ್ಕೆ ಹೋಗಿ ಪತ್ನಿ ಸಾವಿನಲ್ಲಿ ಅಂತ್ಯವಾದ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಚಾಪೆಲ್ಲ ಎಂಬಲ್ಲಿ ನಡೆದಿದೆ.
ಕುಸುಮ ಮತ್ತು ಆಕೆಯ ಪತಿ ಸಂಜೀವ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶನಿವಾರ ಕೂಡ ಮಾತಿಗೆ ಮಾತು ಬೆಳೆದಿದೆ.
ಕೋಪದ ಭರದಲ್ಲಿ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಈ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿದ್ದು, ಅವರು ಬಂದು ಆಸ್ಪತ್ರೆಗೆ ಸೇರಿಸುವ ಪ್ರಯತ್ನದಲ್ಲಿದ್ದಾಗ ಕುಸುಮ ತನ್ನ ಪ್ರಾಣವನ್ನು ಕಳೆದುಕೊಂಡಿರುತ್ತಾರೆ.
ಸಂಜೀವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























