ಪುತ್ತೂರು : ಕಳೆದ 7 ವರುಷಗಳಿಂದ ದರ್ಬೆಯ ಗಿರಿಜಾ ಕ್ಲಿನಿಕ್ ನ ಪಕ್ಕದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ಫ್ಯಾನ್ ಹಾಗೂ ವಿವಿಧ ಬಗೆಯ ಲೈಟ್ ಗಳ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ಏಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ನ.6 ರಂದು ಶುಭಾರಂಭಗೊಳ್ಳಲಿದೆ.
ಸಂಸ್ಥೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.
ಅಸಯ್ಯದ್ ಆಲಿ ತಂಗಲ್ ಕುಂಬೋಳ್, ಅಸಯ್ಯದ್ ಪೂಕೋಯ ತಂಗಲ್ ಪುತ್ತೂರು, ಅಸಯ್ಯದ್ ಹಾಶಿಂ ಬಾಅಲವಿ ತಂಗಲ್ ಕೊರಿಂಗಿಲ ಹಾಗೂ ಅಸಯ್ಯದ್ ಜಲಾಲು ದುವಾ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ. ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಅಲಿ, ಜಿಲ್ಲಾ ಕಾಂಗ್ರೆಸ್ ಸಂಯೋಜಕರಾದ ಮೊಹಮ್ಮದ್ ಬಡಗನ್ನೂರು ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ.
ಸುಮಾರು ಏಳು ವರುಷಗಳಿಂದ ದರ್ಬೆಯ ಗಿರಿಜ ಕ್ಲಿನಿಕ್ ನ ಪಕ್ಕದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿದ್ದ ‘ಹೈಟೆಕ್ ಲೈಟಿಂಗ್ ಹೌಸ್’ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ ಗ್ರಾಹಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿತ್ತು., ಮಾತ್ರವಲ್ಲದೇ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿತ್ತು.
ಸಂಸ್ಥೆಯು ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ. ಪ್ರತೀ ಫ್ಯಾನ್ಸಿ ಲೈಟ್ ಗಳ ಮೇಲೆ ಶೇಕಡ 30 ರಿಂದ 50ರವರೆಗೆ ರಿಯಾಯಿತಿ ದೊರೆಯಲಿದೆ.
ಸಂಸ್ಥೆಯು ಕ್ರಾಂಪ್ಟನ್ ಕಂಪೆನಿಯ ಅಧಿಕೃತ ಡೀಲರ್ ಶಿಫ್ ಹೊಂದಿದ್ದು, 2599 ರೂ. ಕ್ರಾಂಪ್ಟನ್ ಕಂಪೆನಿಯ ಫ್ಯಾನ್ ಗಳು 2 ವರುಷಗಳ ವ್ಯಾರಂಟಿಯೊಂದಿಗೆ ಕೇವಲ 1499 ರೂ. ಗೆ ಲಭ್ಯವಿದೆ.
ಫಿಲಿಪ್ಸ್ ಕಂಪೆನಿಯ 599 ಬೆಲೆಯ ಟ್ಯೂಬ್ ಲೈಟ್ ಗಳು ಕೇವಲ 170 ರೂ. ಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ನೌಫಲ್ ಬೆಟ್ಟಂಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























