ಪುತ್ತೂರು : ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸುಳ್ಯ ತಾಲೂಕಿನ ಪಂಜದ ಯುವಕನೋರ್ವ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ನಡೆದಿದೆ.
ಪಂಜದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಎಂಬವರ ಪುತ್ರ ಬಿಪಿನ್ ನೀರುಪಾಲಾದ ಯುವಕ.
ಬಿಪಿನ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶನಿವಾರ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದು, ಬಳಿಕ ಅಲ್ಲಿನ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರಪಾಲಾಗಿದ್ದಾರೆ. ಭಾನುವಾರ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತರು ತಂದೆ, ತಾಯಿ, ಸಹೋದರಿ ರಚನಾ ಚಿದ್ಗಲ್ ರನ್ನು ಅಗಲಿದ್ದಾರೆ.


























