ಪುತ್ತೂರು : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯು ಅ.28,29, 30 ರಂದು ಮಧ್ಯಪ್ರದೇಶದ ದೇವಾಸ್‍ನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ : (14ರ ವಯೋಮಾನದ) ಅಭಿಜ್ಞಾ ಶಾಂಭವಿ, 6ನೇ ತರಗತಿ ( ಸುಧೀರ್ ಮತ್ತು ಲತಾ ದಂಪತಿ ಪುತ್ರಿ) –ಪ್ರಥಮ ಸ್ಥಾನ ದೊಂದಿಗೆ ಚಿನ್ನ ಪದಕ, ಮಹತಿ, 6ನೇ ತರಗತಿ ( ಶಿವರಂಜನ್.ಎಂ ಮತ್ತು ಲಾವಣ್ಯ ಭಟ್ ದಂಪತಿ ಪುತ್ರಿ)- ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿರುತ್ತಾಳೆ.
ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ (17ರ ವಯೋಮಾನದ) – ಪ್ರಮಥ.ಎಂ.ಭಟ್, 10ನೇ ತರಗತಿ ( ರವಿನಾರಾಯಣ.ಎಂ ಮತ್ತು ಶರಾವತಿ ದಂಪತಿ ಪುತ್ರ) – ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿರುತ್ತಾನೆ.
ಪ್ರಥಮ ಸ್ಥಾನ ಪಡೆದ ಅಭಿಜ್ಞಾ ಶಾಂಭವಿ ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

























