ಹಾಸನ : ನಾನು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಬಾರದು ಅಂತಾ ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ. ಈ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಸಂಬಂಧ ಮಾತಾಡಿದ ಡಿ.ವಿ ಸದಾನಂದ ಗೌಡರು, ಬಿಜೆಪಿ ನನಗೆ ಸಾಕಷ್ಟು ನೀಡಿದೆ. ನಾನು ನನ್ನ ಪಕ್ಷದಿಂದ ಲಾಭ ಪಡೆದುಕೊಂಡಿದ್ದೇನೆ. ಈಗ ಹೆಚ್ಚೇನು ಆಸೆ ಇಲ್ಲ. ಹೀಗಾಗಿ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಬಾರದು ಎಂದು ತೀರ್ಮಾನಿಸಿದ್ದೇನೆ ಎಂದರು.
ಕರ್ನಾಟಕ ಸಿಎಂ ಆದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದೆ. 10 ವರ್ಷ ಶಾಸಕ, 20 ವರ್ಷ ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ. ಯಡಿಯೂರಪ್ಪ ಬಿಟ್ಟರೆ ನಮ್ಮ ಪಕ್ಷದಲ್ಲಿ ನಾನೇ ನಂಬರ್ ಒನ್ ಫಲಾನುಭವಿ ಎಂದರು.


























