ಪುತ್ತೂರು : ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಕಲ್ಲಿಮಾರ್ ನಲ್ಲಿ ನಡೆದಿದೆ.

ಬೈಪಾಸ್ ಸಂಪರ್ಕ ರಸ್ತೆಯಾದ ಕಲ್ಲಿಮಾರ್ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಮರ ಬಿದ್ದ ಹಿನ್ನೆಲೆ ಮೂರು ವಿದ್ಯುತ್ ಕಂಬ ಹಾಗೂ ಎರಡು ಮನೆಗಳ ಕಾಂಪೌಂಡ್ ಗೆ ಹಾನಿಯುಂಟಾಗಿದೆ.

ಘಟನೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಮರ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.



























