ಪುತ್ತೂರು : ಪುತ್ತಿಲ ಪರಿವಾರದ ಕೆಮ್ಮಿಂಜೆ ವಾರ್ಡಿನ ಕಾರ್ಯದರ್ಶಿ ಬಾಲಕೃಷ್ಣ ಗೌಡ ರವರ ಮಗ ಮೆದುಳಿನ ಕಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆಗೆ ಸುಮಾರು 10 ಲಕ್ಷ ರೂ. ಅವಶ್ಯಕತೆಯಿದೆ. ಪುತ್ತಿಲ ಪರಿವಾರದ ವತಿಯಿಂದ ಒಂದು ದಿನದಲ್ಲಿ ಸಂಗ್ರಹಿಸಿದ 1 ಲಕ್ಷ ರೂ. ಚೆಕ್ ಅನ್ನು ಅರುಣ್ ಕುಮಾರ್ ಪುತ್ತಿಲ ಹಸ್ತಾಂತರಿಸಿದರು.

ಈ ವೇಳೆ ಪುತ್ತಿಲ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.
ಯುವಕನ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಹಣಕಾಸಿನ ನೆರವು ಬೇಕಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ದಾನಿಗಳು ನೆರವಿನ ಹಸ್ತ ಬೇಕಾಗಿದೆ..


























