ಮಂಗಳೂರು : ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಮ್ ಇಂಡಸ್ಟ್ರೀಸ್ ಚಾಮರಾಜನಗರ ವತಿಯಿಂದ ಚಾಮರಾಜನಗರದಲ್ಲಿ ಖಾಲಿ ಇರುವ ಡಿಪ್ಲೊಮಾ ಇಂಜಿನಿಯರ್ ಪ್ರೊಡಕ್ಷನ್ ಕ್ವಾಲಿಟಿ ಮೆಟೀರಿಯಲ್ ಹ್ಯಾಂಡಲಿಂಗ್ ಮತ್ತು ಸೆಕ್ಷನಲ್ ಇಂಜಿನಿಯರ್ ಹುದ್ದೆಗಳಿಗೆ ನೇರ ಸಂದರ್ಶನ ನ.10 ರಂದು ಬೆಳಗ್ಗೆ 10ರಿಂದ 1.30ರ ವರೆಗೆ ಲಾಲ್‌ಬಾಗ್ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ.
ಡಿಪ್ಲೊಮಾ ಇಂಜಿನಿಯರ್ ಹುದ್ದೆಯ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಡಿಪ್ಲೊಮಾ ಕೆಮಿಕಲ್, ಮೆಕ್ಯಾನಿಕಲ್, ಪೆಟ್ರೋ ಕೆಮಿಕಲ್ ವಿದ್ಯಾರ್ಹತೆಯೊಂದಿಗೆ 2 ರಿಂದ 4 ವರ್ಷಗಳ ಅನುಭವ ಹೊಂದಿರಬೇಕು. 26 ವರ್ಷ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು.
ಸೆಕ್ಷನಲ್ ಎಂಜಿನಿಯರ್ ಹುದ್ದೆಗೆ ಬಿಇ ಮೆಕ್ಯಾನಿಕಲ್ ವಿದ್ಯಾರ್ಹತೆಯೊಂದಿಗೆ 3ರಿಂದ 8 ವರ್ಷ ಅನುಭವ ಅಥವಾ ಡಿಪ್ಲೊಮಾ ಮೆಕ್ಯಾನಿಕಲ್ ಅಭ್ಯರ್ಥಿಗಳು 5ರಿಂದ 9 ವರ್ಷ ಅನುಭವ ಹೊಂದಿರಬೇಕು. ಸಂದರ್ಶನಕ್ಕೆ ಹಾಜರಾಗುವವರು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























