ಪುತ್ತೂರು : ಹತ್ತೂರಿನ ಅಶ್ರಫ್ ಹೆಸರಿನವರು ಒಂದೆಡೆ ಸೇರುವ ವಿಶೇಷ ಕಾರ್ಯಕ್ರಮವೊಂದು ಪುತ್ತೂರಿನಲ್ಲಿ ನಡೆಯಿತು.

ಕೇರಳದಲ್ಲಿ ಯಶಸ್ವಿ ಸಾಮಾಜಿಕ ಕೆಲಸಗಳ ಮೂಲಕ, ಸಮಾಜಮುಖಿಯಾಗಿ ತೊಡಗಿಸಿಕೊಂಡ ಅಶ್ರಫ್ ಹೆಸರಿನವರ “ಅಶ್ರಫ್ ಒಕ್ಕೂಟ” ಸಂಘಟನೆಯೂ, ಇದೀಗ ಕರ್ನಾಟಕದಲ್ಲಿ ಕೂಡ ಅಸ್ತಿತ್ವಗೊಂಡಿದ್ದು, ಇದರ ನೂತನ ಸಮಿತಿ ರಚನೆ ಸಭೆ ಹಾಗೂ ಸಮಾವೇಶ ಪುತ್ತೂರಿನ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.

ರಾಜ್ಯದ ವಿವಿದೆಡೆ ಇರುವ ಅಶ್ರಫ್ ಹೆಸರಿನವರನ್ನು “ಅಶ್ರಫ್ ಒಕ್ಕೂಟ ಕರ್ನಾಟಕ” ಎಂಬ ಸಂಘಟನೆಯಡಿ ಸೇರಿಸಿ, ಪರಸ್ಪರ ಪರಿಚಯಸ್ಥರನ್ನಾಗಿ ಮಾಡಿಸುವುದು ಮತ್ತು ಸಂಘಟನೆಯಡಿ ಸಾಮಾಜಿಕ ಕೆಲಸಗಳನ್ನು ಮಾಡಬೇಕೆನ್ನುವುದು ಸಂಘಟನೆಯ ಉದ್ದೇಶವಾಗಿದೆ.

“ಅಶ್ರಫ್ ಒಕ್ಕೂಟ” ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾದಾಪುರ ಆಯ್ಕೆಯಾದರು.
ಸುಮಾರು 400 ರಿಂದ 500 ಮಂದಿ ಅಶ್ರಫ್ ಎಂಬ ಹೆಸರಿನವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

























